ಚಿಕ್ಕಮಗಳೂರು: ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿಂದು ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ನಿಶಾನೆ ತೋರಲಾಯಿತು.

ಚಿಕ್ಕಮಗಳೂರು- ಉಡುಪಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಅವರ ವಿಶೇಷ ಶ್ರಮದಿಂದ ಈ ನೂತನ ಟ್ರೇನ್ ಸಂಪರ್ಕಕ್ಕೆ ಅನುಮೋದನೆ ದೊರಕಿದೆ.

ಹಾಗೆ ಟ್ರೈನ್ ಗೆ ದತ್ತಪೀಠ ಎಕ್ಸ್ ಪ್ರೆಸ್ ಎಂದು ಹೆಸರಿಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು, ಈ ಬಗ್ಗೆ ಕೇಂದ್ರ ಸಚಿವರು ಸಮ್ಮತಿ ಸೂಚಿಸಲಾಗಿದೆ. ಆದರೆ ಇನ್ನೂ ಅಂಗೀಕೃತವಾಗಿ ಇನ್ನೂ ಹೆಸರಿಡಲಾಗಿಲ್ಲ

ದತ್ತಪೀಠ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಹಲವು ದಶಕಗಳಿಂದ ಹಿಂದೂಪರ ಸಂಘಟನೆಗಳು ಹಾಗಾಗಿ ಇಂದಿನ ಉದ್ಘಾಟನೆ ಸಭೆಯಲ್ಲಿ ವಿ ಸೋಮಣ್ಣ ಸಹ ಹೆಸರಿಡುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ, ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು, ವಿಧಾನ ಪರಿಷತ್ ಉಪಸಭಾಪತಿಗಳಾದ ಶ್ರೀ ಎಂ.ಕೆ ಪ್ರಾಣೇಶ್ ಅವರು, ಶೃಂಗೇರಿಯ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ.ಟಿ ರವಿಯವರು, ಮಾಜಿ ಶಾಸಕರಾದ ಶ್ರೀ ಡಿ.ಎಸ್ ಸುರೇಶ್ ಅವರು, ಶ್ರೀಮತಿ ಗಾಯತ್ರಿ ಅವರು, ನಗರಸಭೆ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ದಿನೇಶ್ ಅವರು, ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.