ಚಿಕ್ಕಮಗಳೂರು: ಸರ್ಕಾರಿ ಬಸ್ಸಿನಲ್ಲಿ ಮುರಿದುಬಿದ್ದಿದ್ದ ಸೀಟಿಗೆ ರೈತರೊಬ್ಬರು ತಮ್ಮ ಟವೆಲ್ ಕಟ್ಟಿ ಕುಳಿತು ಪ್ರಯಾಣಿಸಿದ್ದಾರೆ. ಈ ಘಟನೆಯು ಸಾರಿಗೆ ಇಲಾಖೆಯ ಬಸ್‌ಗಳ ಅವ್ಯವಸ್ಥೆ ಬಗ್ಗೆ ರೈತರೊಬ್ಬರು ಪರಿಹಾರ ಸೂಚಿಸಿ ಎನ್ನುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರು-ಹಾಸನ ಮಾರ್ಗ ಮಧ್ಯೆ ಬಸ್ ಚಲಿಸುತ್ತಿದ್ದಾಗ ರೈತರೊಬ್ಬರು ಬಸ್ ಹತ್ತಿದ್ದಾರೆ. ಸೀಟು ಮುರಿದಿರುವುದನ್ನು ಕಂಡ ಅವರು ಬೈದುಕೊಳ್ಳದೆ, ಬೇರೆ ಸೀಟು ನೋಡದೆ ತಮ್ಮ ಬಳಿಯಿದ್ದ ಟವೆಲ್ ಅನ್ನು ಸೀಟಿನ ರಾಡ್‌ಗೆ ಭದ್ರವಾಗಿ ಕಟ್ಟಿ, ಅದನ್ನೇ ಆಸರೆಯಾಗಿಸಿಕೊಂಡು ಆರಾಮವಾಗಿ ಕುಳಿತು ಪ್ರಯಾಣಿಸಿದ್ದಾರೆ
ಈ ದೃಶ್ಯವನ್ನು ಕಂಡ ಸಹ ಪ್ರಯಾಣಿಕರು ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಪುಕ್ಕಟ್ಟೆ ಪ್ರಯಾಣವೇನೋ ಸರಿ, ಆದರೆ ಕನಿಷ್ಠ ಕುಳಿತುಕೊಳ್ಳಲು ಸೀಟುಗಳೂ ಗಟ್ಟಿ ಇಲ್ಲದಂತಾಗಿರುವುದು ಶಕ್ತಿ ಯೋಜನೆಯ ಅಡ್ಡಪರಿಣಾಮವೇ?’ ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ.

ಸಾರಿಗೆ ಇಲಾಖೆಯ ಬಸ್‌ಗಳು ದಾರಿ ಮಧ್ಯದಲ್ಲಿ ಕೆಟ್ಟು ನಿಲ್ಲದಿದ್ದರೆ ಸಾಕು ಎಂಬ ಆತಂಕದಲ್ಲೇ ಜನರು ಪ್ರಯಾಣ ಮಾಡುತ್ತಿದ್ದು ಸಾರಿಗೆ ಇಲಾಖೆ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಸುಧಾರಣೆ ಆಗಲಿ ಹಾಗೆ ಸಚಿವರು ಇದನ್ನ ಗಮನಹರಿಸಲೇ ಬೇಕು ಎಂದು ಆಗ್ರಹಿಸಿದ್ದಾರೆ.
