ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕತೆ ನೀಡಿರೋ ಮುಷ್ಕರಕ್ಕೆ ಕಾಫಿನಾಡಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರು ವಿಭಾಗದ 6 ಡಿಪೋಗಳ 560 ಬಸ್‌ಗಳು ಸ್ಥಗಿತಗೊಂಡಿವೆ.ಹೀಗಾಗಿ ಕೆಲಸ ಕಾರ್ಯಕ್ಕೆ ತೆರಳುವವರಿಗೆ ಕಷ್ಟಕರವಾಗಿದೆ, ಬಸ್ʼಗಳಿಲ್ಲದೇ ಪರದಾಡುವಂತಾಗಿದೆ.

ಚಾಲಕರು-ನಿರ್ವಾಹಕರು ಬಸ್ ಗಳನ್ನ ಡಿಪೋಗೆ ಹಾಕಿ ಬಸ್ ನಿಲ್ದಾಣ ಹಾಗೂ ಡಿಪೋ ಬಳಿ ಜಮಾಯಿಸಿದ್ದಾರೆ. ಬಸ್ ಬಂದ್ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕೂಡ ಸಂಪೂರ್ಣ ವಿರಳವಾಗಿದೆ. ಆದರೆ, ಹೈ ಕೋರ್ಟ್ ಕೂಡ ಒಂದು ದಿನ ಮುಂದೂಡುವಂತೆ ಸೂಚನೆ ನೀಡಿದ್ರು ಮುಷ್ಕರ ನಡೆಯುತ್ತಿರೋದ್ರಿಂದ ಚಾಲಕರು-ನಿರ್ವಾಹಕರು ಯಾವ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದ್ರು ಆಗಬಹುದು ಎಂದು ಯಾರೂ ಕೂಡ ಅಕ್ಕಪಕ್ಕದ ಹಳ್ಳಿಯ ಮನೆಗಳಿಗೂ ಹೋಗಿಲ್ಲ. ಆದರೆ, ಬಸ್ ಬಂದ್ ಹಿನ್ನೆಲೆ ಕಾಫಿನಾಡ ಬಸ್ ನಿಲ್ದಾಣ ಸಂಪೂರ್ಣ ಸ್ಥಬ್ಧವಾಗಿದೆ.