Sunday, March 29, 2026
Homeಕ್ರೈಮ್ಚಿಕ್ಕಮಗಳೂರು: ವರ್ಕ್‌ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ವಂಚನೆ: 2.57 ಲಕ್ಷ ಕಳೆದುಕೊಂಡ ಮಹಿಳೆ

ಚಿಕ್ಕಮಗಳೂರು: ವರ್ಕ್‌ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ವಂಚನೆ: 2.57 ಲಕ್ಷ ಕಳೆದುಕೊಂಡ ಮಹಿಳೆ

ಚಿಕ್ಕಮಗಳೂರು: ಅಂತರ್ಜಾಲ ದಲ್ಲಿ ಕಾಣಿಸಿದ ಕೆಲಸ ಕೊಡಿಸುವ ಜಾಹೀರಾತು ನಂಬಿದ ಮಹಿಳೆ ಯೊಬ್ಬರು ₹2.57 ಲಕ್ಷ ಕಳೆದುಕೊಂಡಿದ್ದಾರೆ.

ತಮ್ಮ ಮೊಬೈಲ್‌ಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಬಂದ ವರ್ಕ್‌ ಫ್ರಂ ಹೋಂ ಜಾಹೀರಾತಿನ ಲಿಂಕ್ ಕ್ಲಿಕ್ಕಿಸಿದ್ದಾರೆ. ನಂತರ ಬಂದ ಸೂಚನೆಗಳನ್ನು ಪಾಲಿಸಿ ಮೊದಲಿಗೆ ₹1 ಸಾವಿರ ಹಣ ಪಾವತಿಸಿದ್ದಾರೆ. ಬಳಿಕ ವಂಚಕರು ₹1300 ವಾಪಸ್ ಕಳುಹಿಸಿದ್ದಾರೆ.

ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿದ  ವಂಚಕರು ಮಹಿಳೆಯಿಂದ ಹಂತ–ಹಂತವಾಗಿ  ₹2,57,600 ಪಡೆದಿದ್ದಾರೆ. ಆ ಬಳಿಕ ವಂಚನೆ ಎಂಬುದು ಗೊತ್ತಾಗಿದೆ. ಮಹಿಳೆ ಚಿಕ್ಕಮಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

‘ಈ ರೀತಿ ಉದ್ಯೋಗ ನೀಡುವುದಾಗಿ ಆನ್‌ಲೈನ್ ಜಾಹೀರಾತು ನೀಡಿ ಜನರನ್ನು ಮೋಸ ಮಾಡುವ ಪ್ರಕರಣ ಹೆಚ್ಚಾಗುತ್ತಿವೆ. ಅಂತಹ ಕಂಪನಿಗಳ ಬಗ್ಗೆ ಸಂಪೂರ್ಣವಾಗಿ ಸಂಶೋಧಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು.

ಮುಂಗಡ ಶುಲ್ಕದ ಅಗತ್ಯ ಇರುವ ಅವಕಾಶಗಳ ಬಗ್ಗೆ ಜಾಗರೂಕರಾಗಿರಬೇಕು. ಅನುಮಾನಾಸ್ಪದ ಆನ್‌ಲೈನ್ ಪ್ರಕ್ರಿಯೆ ಗಮನಿಸಿದ ಕೂಡಲೇ ಹತ್ತಿರದ ಠಾಣೆ ಅಥವಾ 1930 ಸಹಾಯವಾಣಿಗೆ ಕರೆ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!