ಚಿಕ್ಕಮಗಳೂರು: ದನ ಮೇಯಿಸಲು ಜಮೀನಿಗೆ ತೆರಳಿದ್ದ ವೇಳೆ ತುಂಡಾಗಿ ಬಿದ್ದಿದ್ದ ತಂತಿಯನ್ನು ಗಮನಿಸದೇ ತುಳಿದ ಪರಿಣಾಮ ಸತಳದಲ್ಲೇ ರೈತನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಡೇರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಶ್ವರಹಳ್ಳಿಯಲ್ಲಿ ನಡೆದಿದೆ.

ರೈತ ರಂಗೇಗೌಡ(68), ಮೃತ ದುರ್ದೈವಿಯಾಗಿದ್ದು, ಸೋಮವಾರ ಸಂಜೆ ತನ್ನ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ಗಮನಿಸದೇ ತುಳಿದು ರೈತ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.