Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಪ್ಲಾಸ್ಟಿಕ್ ಮುಕ್ತ ಭಾರತ ಎಲ್ಲರ ಧ್ಯೇಯವಾಗಲಿ

ಚಿಕ್ಕಮಗಳೂರು: ಪ್ಲಾಸ್ಟಿಕ್ ಮುಕ್ತ ಭಾರತ ಎಲ್ಲರ ಧ್ಯೇಯವಾಗಲಿ

ಚಿಕ್ಕಮಗಳೂರು: ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ, ನೇಚರ್ ಕನ್ಸರ್ವೇಷನ್ ಟ್ರಸ್ಟ್ ಬಿಕ್ಕಿಮನೆ ವತಿಯಿಂದ ಚಿಕ್ಕಮಗಳೂರು ನಗರದ ಎಸ್‌ಟಿಜೆ ಪದವಿ ಪೂರ್ವ ಕಾಲೇಜಿನಲ್ಲಿ ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ಅವರು ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನ ದಿನನಿತ್ಯ ಬಳಸಬೇಕು, ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬ ನಾಗರಿಕನ ಜಯವಾಗಲಿ ಎಂದು ಹೇಳಿದರು.

ನೇಚರ್ ಕನ್ಸರ್ವಷನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಂದರಗೌಡ ಅವರು ಮಾತನಾಡಿ ಜಗತ್ತು ವಾತಾವರಣ ವೈಪರಿತ್ಯದಿಂದ ಕೊನೆಯಾಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ಮನೆಗೊಂದು ಮರ ಊರಿಗೊಂದು ವನ ಎಂಬ ನಾಣ್ನುಡಿ ಅಂತೆ ಪ್ರತಿಯೊಬ್ಬರೂ ತಮ್ಮ ಜೀವನದ ವಿಶೇಷ ದಿನಗಳನ್ನು ಸಸಿ ನೆಡುವ ಮೂಲಕ ಪ್ರತಿದಿನವನ್ನ ಪರಿಸರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಹಾಸ್, ಹರೀಶ್, ಸುಮ, ಆಶಾ ಉಪಸ್ಥಿತರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!