Thursday, March 26, 2026
Homeಕ್ರೈಮ್ಚಿಕ್ಕಮಗಳೂರು: ಚಿನ್ನ ಖರೀದಿ ಮಾಡಿ NEFT ಮುಖಾಂತರ ಹಣ ವರ್ಗ ಮಾಡುವುದಾಗಿ ವಂಚನೆ: ವ್ಯಕ್ತಿ ಬಂಧನ

ಚಿಕ್ಕಮಗಳೂರು: ಚಿನ್ನ ಖರೀದಿ ಮಾಡಿ NEFT ಮುಖಾಂತರ ಹಣ ವರ್ಗ ಮಾಡುವುದಾಗಿ ವಂಚನೆ: ವ್ಯಕ್ತಿ ಬಂಧನ

ಚಿಕ್ಕಮಗಳೂರು: ಚಿನ್ನಾಭರಣ ಅಂಗಡಿಯಿಂದ ಚಿನ್ನ ಖರೀದಿ ಮಾಡಿ ಹಣವನ್ನು NEFT ಮುಖಾಂತರ ವರ್ಗಾವಣೆ ಮಾಡುವುದಾಗಿ ನಂಬಿಸಿ ರೂ. 3.5 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಮೋಸದಿಂದ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯನ್ನು ಸಖರಾಯಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.

ಹೌದು .. ಸೆಪ್ಟಂಬರ್‌ 22ರಂದು ಆರೋಪಿಯಿಂದ ಸಖರಾಯಪಟ್ಟಣದ ಚಿನ್ನಾಭರಣ ಅಂಗಡಿಯಿಂದ ಖರೀದಿ ಮಾಡಿದ್ದು 3.5 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಕಾರು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿರುತ್ತದೆ.

ಈತನು ತುಮಕೂರು, ಕೋಲಾರ, ಮೈಸೂರು, ಬೆಂಗಳೂರು ನಗರಗಳಲ್ಲಿ ಇದೇ ರೀತಿಯ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ.

ಆರೋಪಿ ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ಪಿಎಸ್ಐ ಶ್ರೀ. ಪವನ್ ಕುಮಾರ್ ಸಿ ಸಿ ಮತ್ತು ಶ್ರೀಮತಿ. ಮಂಜುಳಾಬಾಯಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ. ದೇವರಾಜ, ಶ್ರೀ. ಅರುಣ್ ಕುಮಾರ್, ಶ್ರೀ. ಶಿವಕುಮಾರ್ ವಿ, ಶ್ರೀ. ವಸಂತಕುಮಾರ, ಶ್ರೀ. ಸಂದೇಶ, ಶ್ರೀ. ಮಂಜಪ್ಪ, ಶ್ರೀ. ರವಿನಾಯ್ಕ, ಶ್ರೀ. ರಘು, ಶ್ರೀ. ಕೃಷ್ಣಮೂರ್ತಿ ಮತ್ತು ಕಾರ್ತಿಕ್ ರವರು ಕಾರ್ಯನಿರ್ವಹಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!