ಚಿಕ್ಕಮಗಳೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಹಾಸನ ಆಗ್ತಿದ್ದಂತೆ ಈಗ ಚಿಕ್ಕಮಗಳೂರಿನಲ್ಲೂ ವ್ಯಕ್ತಿಯೊಬ್ಬರು ಮೆಡಿಕಲ್‍ನಲ್ಲಿ ಮಾತ್ರೆ ಖರೀದಿಸಿ, ಅಲ್ಲೇ ನೀರು ತೆಗೆದುಕೊಂಡು ಮಾತ್ರೆ ಸೇವಿಸುವಾಗ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.

ಮೃತರನ್ನು ವಿಶ್ವನಾಥ್ (65) ಎಂದು ಗುರುತಿಸಲಾಗಿದೆ. ಜೂ.26 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾತ್ರೆ ತೆಗೆದುಕೊಂಡು ನೀರು ಕುಡಿಯುವಾಗಲೇ ಹೃದಯಾಘಾತವಾಗಿದೆ. ಈ ವೇಳೆ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಮತ್ತೊಂದು ಪ್ರಕರಣದಲ್ಲಿ ಹೋಟೆಲ್ ಕಾರ್ಮಿಕರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬಳ್ಳಾರಿ ಮೂಲದ ಮಹೇಶ್ (45) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. 2 ವರ್ಷಗಳಿಂದ ಬಣಕಲ್ ಹೋಟೆಲ್ ಒಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಜೂ.25ರ ಬೆಳಗ್ಗೆ ಅವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.