ಕೊಡಗಿನ ಸೋಮವಾರಪೇಟೆಯಲ್ಲಿ ಹತ್ತನೇ ತರಗತಿ ಬಾಲಕಿ ಮೀನಾಳನ್ನು ಹತ್ಯೆಗೈದು ಆಕೆಯ ರುಂಡ ಸಮೇತ ಪರಾರಿಯಾಗಿದ್ದ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೃತದೇಹ ಪತ್ತೆಯಾಗಿದೆ ಎಂದು ನಿನ್ನೆ ಸಂಜೆ ಸುದ್ದಿಯಾಗಿತ್ತು.ಆದರೀಗ ಆ ಸುದ್ದಿ ಊಹಾಪೋಹ ಎಂಬ ಸತ್ಯ ಹೊರ ಬಿದ್ದಿದೆ.
ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಓಂಕಾರಪ್ಪ ತನ್ನ ಮನೆಯ ಸಮೀಪದಲ್ಲೇ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೂಲಕ ನಿನ್ನೆಯಿಂದ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ತೆರೆ ಬಿದ್ದಿದೆ. ಸದ್ಯ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.