Monday, February 9, 2026
Homeಜಿಲ್ಲಾಸುದ್ದಿಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ: ಪರಸ್ಥಳದವರಿಗೆ ಊಟೋಪಾಚಾರ ವ್ಯವಸ್ಥೆ ಮಾಹಿತಿ ಇಲ್ಲಿದೆ

ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ: ಪರಸ್ಥಳದವರಿಗೆ ಊಟೋಪಾಚಾರ ವ್ಯವಸ್ಥೆ ಮಾಹಿತಿ ಇಲ್ಲಿದೆ

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಹಿಂದಿಗಿಂತ ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ದೇವಿ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಹಾಗೆ ಅ.9ರಂದು ಹಾಸನಾಂಬ ದೇಗುಲ ಓಪನ್ ಆಗಲಿದೆ.

ಹೌದು.. ಹಾಗೆ ಹಾಸನಂಬ ದರ್ಶನ ಸಮಯದಲ್ಲಿ ಪರಸ್ಥಳದವರಿಗೆ ಊಟದ ಉಪಚಾರ ವ್ಯವಸ್ಥೆಯನ್ನು ಶೃಂಗೇರಿ ಶ್ರೀ ಶಂಕರ ಮಠ ಕೆಆರ್‌ ಪುರಂ ಹಾಸನ ಇವರ ವತಿಯಿಂದ ಅಕ್ಟೋಬರ್ 10 ರಿಂದ 22 ರವರೆಗೆ ಭೋಜನ ಉಪಹಾರದ ವ್ಯವಸ್ಥೆಯನ್ನು ಕೈಗೊಂಡಿರುತ್ತಾರೆ.

ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಪರಸ್ಥಳದಿಂದ ದೇವಿಯ ದರ್ಶನಕ್ಕೆ ಬರುವವರಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿಲಾಗಿದ್ದು ಒಂದು ದಿನ ಮುಂಚಿತವಾಗಿ ಎಷ್ಟು ಜನ ಬರುತ್ತಾರೆ ಯಾವ ಸಮಯಕ್ಕೆ ಬರುತ್ತದೆ ಎಂಬುದಾಗಿ ಕರೆ ಮಾಡಿ ತಿಳಿಸಬೇಕು ಇಲ್ಲಿ ಬಂದಾಗ ಅವರ ಆಧಾರ್ ಕಾರ್ಡ್ ತೋರಿಸಬೇಕು ಎಂದಿದ್ದಾರೆ.

ಹಾಗೆ ಬೆಳಗ್ಗೆ ಬಂದವರು ತಮ್ಮ ವಾಹನಗಳನ್ನು ಶ್ರೀ ಮಠದ ಆವರಣದಲ್ಲಿ ನಿಲ್ಲಿಸಿ ಶೌಚಾ ವಿಧಿಗಳನ್ನು ಪೂರೈಸಿಕೊಂಡು ಆಟೋ ಮಾಡಿಕೊಂಡು ಹೋಗಿ ದರ್ಶನ ಮಾಡಿ ಬಂದು ಭೋಜನ ಸ್ವೀಕರಿಸಬಹುದು ಹಾಗೆ ಸಂಪ್ರದಾಯಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಆ ನಂತರ ಸಂಘ ಸಂಸ್ಥೆಗಳು ತಮ್ಮ ಸಂಸ್ಥೆ ವತಿಯಿಂದ ಬರುವ ಸಂಖ್ಯೆಯನ್ನು ತಮ್ಮ ಲೆಟರ್ ಹೆಡ್ನಲ್ಲಿ ನಮೂದಿಸಿ 9844003434ಗೆ ವಾಟ್ಸಪ್ ಮೂಲಕ ಪೂರ್ವಭಾವಿಯಾಗಿ ತಿಳಿಸಲು ಮನವಿ. ಶ್ರೀಮಠದ ಶಾಖೆ ಸಂಘ ಸಂಸ್ಥೆಗಳ ಪತ್ರ ತರುವವರಿಗೆ ಅದನ್ನೇ ಗುರುತಿನ ಪತ್ರವೆಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ಸಂಪರ್ಕಕ್ಕಾಗಿ 9844003434, 9844641800 ಈ ನಂಬರಿಗೆ ಸಹ ಕರೆ ಮಾಡಿ ವಿಚಾರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!