Wednesday, March 18, 2026
Homeಜಿಲ್ಲಾಸುದ್ದಿಮೂಡಿಗೆರೆ ಕರ್ತವ್ಯ ನಿರತ ಪತ್ರಕರ್ತರ ಕ್ರಿಕೆಟ್ ಕಣ: ಟೀಂ‌ ಜೆಡಿಎಸ್ ದ್ವಿತೀಯ ಸ್ಥಾನ

ಮೂಡಿಗೆರೆ ಕರ್ತವ್ಯ ನಿರತ ಪತ್ರಕರ್ತರ ಕ್ರಿಕೆಟ್ ಕಣ: ಟೀಂ‌ ಜೆಡಿಎಸ್ ದ್ವಿತೀಯ ಸ್ಥಾನ

ಮೂಡಿಗೆರೆ ಕರ್ತವ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂಡಿಗೆರೆ ಜೆಡಿಎಸ್ ತಂಡ ದ್ವಿತೀಯ ಸ್ಥಾನ ಪಡೆದು ಟ್ರೋಫಿ ತನ್ನದಾಗಿಸಿಕೊಂಡಿದೆ. ಒಟ್ಟು ಏಳು ತಂಡಗಳು ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಪೈಪೋಟಿ ನಡೆಸಿ ಪ್ರೇಕ್ಷಕರ ಗಮನ ಸೆಳೆದರು.

ತಮೀಜ್ ಹಾಗೂ ತಂಡದ ನಾಯಕ ಲೋಹಿತ್ ಬಿದರಹಳ್ಳಿ ಅವರ ನೇತೃತ್ವದಲ್ಲಿ ಸೈಫುಲ್ಲಾ, ಸತ್ಯರಾಜ್ ಪ್ರಸನ್ನ ಗೌತಹಳ್ಳಿ, ಗಣೇಶ್, ಚಿರಾಗ್,ಜನ್ನಾಪುರ ಅನಿಲ್,ಗೌತಮ್,ಪ್ರಸಾದ್, ಪ್ರಹ್ಲಾದ್, ವಿಕ್ರಂ, ಕಿರಣ್, ಅಭಿ ಸೇರಿದಂತೆ ಆಟಗಾರರು ಸಮನ್ವಯಯುತ ಆಟ ಪ್ರದರ್ಶಿಸಿ ತಂಡದ ಸಾಧನೆಗೆ ಕೈಜೋಡಿಸಿದರು.

ಜೆಡಿಎಸ್ ಹಿರಿಯ ಮುಖಂಡರಾದ ಮಂಜುನಾಥ್ ಬೆಟ್ಟಗೆರೆ, ಎಚ್.ಎಸ್. ಮಂಜುನಾಥ್, ಗಬ್ಬಳ್ಳಿ ಚಂದ್ರೆಗೌಡ, ಹೂವಪ್ಪ, ಪ್ರದೀಪ್, ತನು ಕೊಟ್ಟಿಗೆಹಾರ ಮತ್ತಿತರರು ತಂಡಕ್ಕೆ ಪ್ರೋತ್ಸಾಹ ನೀಡಿದರು.

ಹಿರಿಯ ಮುಖಂಡ ಮಂಜುನಾಥ್ ಬೆಟ್ಟಗೆರೆ ಮಾತನಾಡಿ “ತಂಡದ ಆಟಗಾರರ ಒಗ್ಗಟ್ಟು ಮತ್ತು ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಕ್ರೀಡಾಕೂಟಗಳು ಯುವಕರಿಗೆ ಪ್ರೇರಣೆಯಾಗುತ್ತವೆ” ಎಂದರು.

ತಂಡದ ನಾಯಕ ಲೋಹಿತ್ ಬಿದರಹಳ್ಳಿ ಮಾತನಾಡಿ, “ಎಲ್ಲ ಆಟಗಾರರ ಸಮನ್ವಯ ಮತ್ತು ಶ್ರಮದಿಂದ ಉತ್ತಮ ಫಲಿತಾಂಶ ದೊರಕಿತು. ಮುಂದಿನ ಬಾರಿ ಪ್ರಥಮ ಸ್ಥಾನ ಗುರಿಯಾಗಿಸಿಕೊಂಡಿದ್ದೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!