ಚಿಕ್ಕಮಗಳೂರು: ಜಾನಪದದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 10 ಕಲಾವಿದರನ್ನು ಜಿಲ್ಲಾ ದಶಮಾನೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ತಿಳಿಸಿದ್ದಾರೆ.

ತರೀಕೆರೆ ರತ್ನಮ್ಮ (ಭಜನೆ), ಕಡೂರಿನ ಶಶಿಕಲಾ ಗಣೇಶಾಚಾರ್ (ಸೋಬಾನೆ ಪದ), ಕಳಸದ ಗಿರಿಜಾ ಗೋಪಾಲ ಬೇಡಕಿ (ಯಕ್ಷಗಾನ), ಚಿಕ್ಕಮಗಳೂರಿನ ವೀಣಾ ಆರ್.ಶೆಟ್ಟಿ (ಸಂಗೀತ), ಅಜ್ಜಂಪುರ ಸರೋಜಮ್ಮ ಈಶ್ವರಪ್ಪ (ಜನಪದ), ಮೂಡಿಗೆರೆಯ ಟಿ.ಕಮಲಾಕ್ಷಿ ಕೃಷ್ಣಪ್ಪ (ಜನಪದ), ಶೃಂಗೇರಿ ಮೆಣಸೆ ಲೀಲಾವತಿ (ಜನಪದ), ಕೊಪ್ಪ ರತ್ನಮ್ಮ ಹಾಲಪ್ಪ ಹೆಗ್ಡೆ (ಅಂಟಿಗೆ-ಪಿಂಟಿಗೆ), ಎನ್.ಆರ್. ಪುರ ಲಲಿತಮ್ಮ ರಾಮಚಂದ್ರಪ್ಪ (ಜನಪದ ಗೀತೆ), ಅಜ್ಜಂಪುರ ಕಾಂತ್ಯಾಯಿನಿ ಚನ್ನೇಗೌಡ (ಕೃಷಿ, ಜನಪದ) ಅವರನ್ನು ಆಯ್ಕೆ ಮಾಡಲಾಗಿದೆ.
ಜುಲೈ 16ರಂದು ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.