ಚಿಕ್ಕಮಗಳೂರು: ಲೋಕಸಭಾ ಕ್ಷೇತ್ರ ಜನಸಂಖ್ಯೆ ಆಧಾರದ ಮೇಲೆ ಆಗಬಾರದು ಬದಲಾಗಿ ಭೌಗೋಳಿಕ ಆಧಾರದ ಮೇಲೆ ಮಾಡಬೇಕು ಹಾಗೂ ಚಿಕ್ಕಮಗಳೂರನ್ನು ಕೂಡ ಒಂದು ಲೋಕಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಭಾರತದ ಎಲ್ಲಾ ತೆರಿಗೆಗಳು ಇಂದು ಉತ್ತರ ಭಾರತದ ಪಾಲಾಗುತ್ತಿದೆ, ಇದೇ ರೀತಿ ಮುಂದುವರೆದರೆ ದಕ್ಷಿಣದ ರಾಜ್ಯಗಳು ದಿವಾಳಿಯಾಗುತ್ತದೆ ಯಾವುದೇ ಅಭಿವೃದ್ಧಿಯನ್ನು ಕಾಣುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹುಣಸೆ ಮಕ್ಕಿ ಲಕ್ಷ್ಮಣ್, ಉಮೇಶ್ ಉಪಸ್ಥಿತರಿದ್ದರು.
