ಕೊಟ್ಟಿಗೆಹಾರ:ಕರ್ನಾಟಕ ರಾಜ್ಯದ ಹೆಮ್ಮೆಯಶಿಖರವಾದಮುಳ್ಳಯ್ಯನಗಿರಿಯಲ್ಲಿ ಸ್ಥಿತಿಗತಿಸಿರುವ ಶ್ರೀ ಮೇಲು ಗದ್ರಿಗೆ ಮುಳಪ್ಪ ಸ್ವಾಮಿಯ ಶ್ರೀಮಠಕ್ಕೆ ಮೂಡಿಗೆರೆ ತಾಲೂಕಿನ ಬಿ. ಹೊಸಹಳ್ಳಿ ಗ್ರಾಮದ ಬಸವನಗುಡಿ ಅಮ್ಮಾವರಮನೆ ಕುಟುಂಬದ ವತಿಯಿಂದ ನೂತನವಾಗಿ ನಿರ್ಮಿಸಲಾದಗುರುವಿನ ಪ್ರಭಾವಳಿಯನ್ನ ಶ್ರದ್ಧಾ-ಭಕ್ತಿಯಿಂದ ಸಮರ್ಪಿಸಲಾಯಿತು.

ಶ್ರೀಮಠದಗುರುಗಳಮಾರ್ಗದರ್ಶನಮತ್ತು ಆಶೀರ್ವಾದದಂತೆ ರೂಪುಗೊಂಡ ಈ ಪ್ರಭಾವಳಿಯನ್ನು ಕುಟುಂಬದ ಸದಸ್ಯರು ಶ್ರೀಮಠಕ್ಕೆ ತೆರಳಿ ವಿಧಿವಿಧಾನಗಳೊಂದಿಗೆ ಅರ್ಪಣೆ ಮಾಡಿದರು. ಪ್ರಭಾವಳಿ ಸಮರ್ಪಣೆಯೊಂದಿಗೆ ಅನ್ನದಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಭಾಗವಹಿಸಿ ಪುಣ್ಯಲಾಭ ಪಡೆದರು.

ಈ ಸಂದರ್ಭ ಮಾತನಾಡಿದ ಅಮ್ಮಾವರಮನೆ ಕುಟುಂಬದ ಸದಸ್ಯ ಹಾಗೂ ಬಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಚ್.ಎಂ. ಆಶ್ರಿತ್ ಗೌಡ ಅವರು, “ನಮ್ಮ ಕುಟುಂಬವು ಹಿರಿಯರ ಕಾಲದಿಂದಲೂ ಶ್ರೀಮಠದೊಂದಿಗೆ ಆತ್ಮೀಯ ಸೇವಾ ಸಂಬಂಧ ಹೊಂದಿದೆ.
ಗುರುಗಳ ಕೋರಿಕೆಯಂತೆ ಪ್ರಭಾವಳಿಯನ್ನು ನಿರ್ಮಿಸಿ ಸಮರ್ಪಿಸುವ ಅವಕಾಶ ದೊರೆತಿರುವುದು ನಮ್ಮ ಕುಟುಂಬಕ್ಕೆ ಅಪಾರ ಸಂತೋಷ ಹಾಗೂ ಆಧ್ಯಾತ್ಮಿಕ ತೃಪ್ತಿಯನ್ನು ತಂದಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಹೆಚ್.ಆರ್. ಚಂದ್ರೇಗೌಡ, ಯೋಗೇಶ್ ಗೌಡ, ಮಹದೇವ್ ಗೌಡ, ಮಂಜುನಾಥ್ ಗೌಡ, ರಾಜೇಗೌಡ, ಎಚ್.ಟಿ. ಪ್ರಸನ್ನ, ವರುಣ್, ರಮೇಶ್ ಗೌಡ, ಸುಬ್ರಾಯಗೌಡ, ಶ್ರೀಧರ್ ಗೌಡ, ವಿಜೇಂದ್ರ ಗೌಡ, ಸುಮನ್, ಲವ, ಧರ್ಮ, ಅರ್ಜುನ್, ಗೀತಾ ಸುರೇಶ್, ರತ್ನಮ್ಮ, ವಿಕ್ರಂ ಸೇರಿದಂತೆ ಅಮ್ಮಾವರಮನೆ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
