Wednesday, February 11, 2026
Homeಕ್ರೈಮ್ತರೀಕೆರೆಯ ಅಂತರಘಟ್ಟೆ ಜಾತ್ರೆಯಲ್ಲಿ ಅನಾಹುತ: ಎತ್ತಿನಗಾಡಿ ನೊಗ ಬಡಿದು ವ್ಯಕ್ತಿ ಸ್ಥಿತಿ ಗಂಭೀರ!

ತರೀಕೆರೆಯ ಅಂತರಘಟ್ಟೆ ಜಾತ್ರೆಯಲ್ಲಿ ಅನಾಹುತ: ಎತ್ತಿನಗಾಡಿ ನೊಗ ಬಡಿದು ವ್ಯಕ್ತಿ ಸ್ಥಿತಿ ಗಂಭೀರ!

ಚಿಕ್ಕಮಗಳೂರು : ತರೀಕೆರೆಯಲ್ಲಿ ನಡೆದ ಐತಿಹಾಸಿಕ ಅಂತರಘಟ್ಟೆ ಜಾತ್ರಾ ಮಹೋತ್ಸವ ವೇಳೆ ಭಾರೀ ಅನಾಹುತ ಸಂಭವಿಸಿದ್ದು ಎತ್ತಿನಗಾಡಿ ನೊಗ ಬಡಿದು ವ್ಯಕ್ತಿ ಸ್ಥಿತಿ ಗಂಭೀರವಾಗಿದೆ.

ವೀರಭದ್ರಸ್ವಾಮಿ ರಥ ಹೊರಟ ಬಳಿಕ ಸಾಲಾಗಿ ಹೊರಟಿದ್ದ 68 ಪಾನಕದ ಗಾಡಿಗಳನ್ನು ನೋಡುತ್ತಾ ನಿಂತಿದ್ದ ವ್ಯಕ್ತಿಯ ಗಂಟಲಿಗೆ ವೇಗವಾಗಿ ಬಂದ ಎತ್ತಿನಗಾಡಿಯ ನೊಗ ಬಡಿದಿದೆ. ಘಟನೆಯಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಬೀರೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೀರೂರು ಪಟ್ಟಣದ ಚಂದ್ರಶೇಖರ್ ಎಂಬುವರ ಕಾಲು ಮುರಿತಗೊಂಡಿದ್ದು ಮತ್ತೊಂದೆಡೆ ತೇರಿಗೆ ಎತ್ತಿನಗಾಡಿ ಡಿಕ್ಕಿ ಹೊಡೆದು ಎತ್ತು ಕೂಡ ಅಸ್ವಸ್ಥವಾಗಿದೆ ಈ ನಡುವೆ ಜನರ ಕೂಗಾಟ ಕಂಡು ಗಾಬರಿಯಿಂದ ಓಡಿ ಹೋದ ಎತ್ತುಗಳು

ಘಟನೆ ಸಂಬಂಧ ಬೀರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!