ಪುತ್ತೂರು: ಸ್ನೇಹಿತನಿಂದಲೇ ಯುವತಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನ್ಯಾಯಕ್ಕೊಳಗಾದ ಯುವತಿ ಪೂಜಾಗೆ ಗೆಲುವು ಸಿಕ್ಕಿದೆ. DNA ಪರೀಕ್ಷೆಯಲ್ಲಿ ಪೂಜಾಳ ಮಗು ಶ್ರೀಕೃಷ್ಣನದ್ದೇ ಅನ್ನೋದು ಸಾಬೀತಾಗಿದೆ. ಆ ಮೂಲಕ ಕಳೆದ ಕೆಲವು ತಿಂಗಳಿಂದ ಪೂಜಾ ಮಾಡುತ್ತಿದ್ದ ನಿರಂತರ ಹೋರಾಟಕ್ಕೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ.
ಶ್ರೀಕೃಷ್ಣನಿಂದ ಪೂಜಾಳಿಗೆ ಆದ ಅನ್ಯಾಯದ ಬಗ್ಗೆ ನಿಮ್ಮ ಪಬ್ಲಿಕ್ ಇಂಪ್ಯಾಕ್ಟ್ ನಿರಂತರವಾದ ಸುದ್ದಿಯನ್ನು ಭಿತ್ತರಿಸುತ್ತಲೇ ಬಂದಿತ್ತು. ಅಲ್ಲದೇ ಕೆ ಪಿ ನಂಜುಂಡಿ ಅವರು ಈ ನೊಂದ ಕುಟುಂಬಕ್ಕೆ ನಿರಂತರ ಬೆಂಬಲ ನೀಡುತ್ತಲೇ ಬಂದಿದ್ದರು, ಸೋಷಿಯಲ್ ಮೀಡಿಯಾದಲ್ಲೂ ಆಕೆಗೆ ಭಾರೀ ಸಪೋರ್ಟ್ ವ್ಯಕ್ತವಾಗಿತ್ತು. ಇದೀಗ ಸತ್ಯಕ್ಕೆ ಸಾವಿಲ್ಲ ಅನ್ನೋದು ಪ್ರೂವ್ ಆಗಿದ್ದು ಡಿಎನ್ ಎ ಪರೀಕ್ಷೆಯಲ್ಲಿ ಮಗು ಶ್ರೀಕೃಷ್ಣನದ್ದು ಅನ್ನೋದು ಸಾಬೀತಾಗಿದ್ದು, ಇನ್ನಾದ್ರೂ ಶ್ರೀಕೃಷ್ಣ ಮನಸ್ಸು ಬದಲಾಯಿಸುತ್ತಾನಾ ಅನ್ನೋದನ್ನು ಕಾದು ನೋಡ್ಬೇಕು.
