ಹಾಸನ: ನಗರದ ಕೆ.ಆರ್.ಪುರಂ ಪ್ರದೇಶದಲ್ಲಿ ಅಶೋಕ್ ಲೇಲ್ಯಾಂಡ್ ವಾಹನ ಚಾಲಕನ ಹುಚ್ಚಾಟಕ್ಕೆ ಜನರನ್ನು ಭೀತಿಗೊಳಿಸಿದ ಘಟನೆ ನಡೆದಿದೆ.
ಪಾನಮತ್ತನ್ನಾಗಿ ಚಾಲಕ ಅತಿವೇಗದಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಸಂದರ್ಭದಲ್ಲಿ, ವಾಹನವನ್ನು ನಿಲ್ಲಿಸಿ ಡ್ರೈವರ್ ಹಾಗೂ ಅವನೊಂದಿಗೆ ಇದ್ದ ಇನ್ನಿಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು
