ಚಿಕ್ಕಮಗಳೂರು: ಒಂದು ಕಡೆ ಮಳೆಯ ಆರ್ಭಟ…ಇನ್ನೊಂದು ಕಡೆ ಕಾಡಾನೆ ಕಾಟ…ಮನೆಯ ಅಂಗಳದಲ್ಲೇ ಬಂದ ಕಾಡಾನೆ ಕಂಡು ಬೆಚ್ಚಿಬಿದ್ದ ಮಂದಿ..ಹೌದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕೋಗಿಲೆ ಗ್ರಾಮದ ಮದನ್ ಎಂಬುವವರ ಮನೆ ಮುಂದೆಯೇ ಕಾಡಾನೆ ಓಡಾಟ ನಡೆಸಿದೆ. ಮನೆಯ ಮುಂದಿನ ತೋಟದಲ್ಲಿ ಹಲಸು ತಿನ್ನಲು ಒಂಟಿ ಸಲಗ ಬಂದಿದ್ದು, ಬೆಳಗ್ಗೆಯಿಂದಲೂ ಕಾಡಾನೆ ಪುಂಡಾಟ ಕಂಡು ಸ್ಥಳೀಯರು ಹೈರಾಣಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಇದೇ ಮಾರ್ಗದಲ್ಲಿ ಪ್ರಸಿದ್ಧ ಪ್ರವಾಸಿ ಸ್ಥಳವಾದ ದೇವರಮನೆ ಗ್ರಾಮಕ್ಕೂ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಹೋಗ್ತಾಲೇ ಇರುತ್ತಾರೆ. ಮನೆ ಮುಂದೆ, ರಸ್ತೆ, ತೋಟಗಳಲ್ಲಿ ಈ ರೀತಿಯಾಗಿ ಕಾಡಾನೆಗಳು ಸಂಚಾರ ನಡೆಸ್ತಾ ಇರೋದ್ರಿಂದ ಜನರು ಓಡಾಟ ನಡೆಸೋದಕ್ಕೂ ಯೋಚನೆ ಮಾಡುವಂತಾಗಿದೆ.