ಜಯಪುರ: ಕೊಪ್ಪ ತಾಲ್ಲೂಕಿನ ಸುತ್ತಮುತ್ತ ಗ್ರಾಮಗಳಿಗೆ ಆನೆಗಳು ದಾಳಿ ಮಾಡಿ ಬೆಳೆ ಹಾಗೂ ಬೈಕ್ ಹಾನಿ ಮಾಡಿವೆ.

ಹೌದು .. ಕೊಪ್ಪ ತಾಲ್ಲೂಕಿನ ಲೋಕನಾಥಪುರ ಸಮೀಪದ ಕೋಣಂಬಿ ಹಾಗೂ ಹೇರೂರು ಗ್ರಾಮದ ಹುತ್ತಿನಗದ್ದೆಯ ನಟರಾಜ್ ಅವರ ತೋಟದಲ್ಲಿ ಎರಡು ಆನೆಗಳು ಬೆಳೆದಿದ್ದ ಅಡಿಕೆ, ಬಾಳೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ಸಮೀಪದ ಸೈಟ್ ಬಳಿ ನಿಲ್ಲಿಸಿದ್ದ ಬೈಕನ್ನು ತುಳಿದು ಜಖಂಗೊಳಿಸಿವೆ.
ಸ್ಥಳಕ್ಕೆ ಕೊಪ್ಪ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಆನೆಗಳನ್ನು ಓಡಿಸಲು ಯತ್ನಿಸಿದ್ದಾರೆ. ಲೋಕನಾಥಪುರ ಸಮೀಪದ ಕೋಣಂಬಿ ಶ್ರೀಕರ, ನಾಗರಾಜ್, ಗುರುಪ್ರಸನ್ನ ಅವರ ಬೆಳೆ ಹಾನಿಯಾಗಿದೆ.
ಅಧಿಕಾರಿಗಳು ಬೆಳೆಹಾನಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಾಣ ಹಾನಿಯಾದರೆ ಯಾರು ಜವಾಬ್ದಾರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.