ಚಿಕ್ಕಮಗಳೂರು: ಎಂಬಿಬಿಎಸ್ ಡಾಕ್ಟರ್ ಎಂದು ಹೇಳಿ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿ, ಅಂಗಡಿಗೆ ಬೀಗ ಜಡಿದಿರುವ ಘಟನೆ ಕಳಸದ ಹಿರೇಬೈಲು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಅನುಮಾನ ಬಂದು ಮೂಡಿಗೆರೆ ವೈದ್ಯಾದಿಕಾರಿ ಹರೀಶ್ ಬಾಬು, ಪೊಲೀಸ್ , ಪಿಡಿಓ ನೇತೃತ್ವದಲ್ಲಿ ದಾಖಲೆ ಪರಿಶೀಲಿಸಿದಾಗ ನಕಲಿ ವೈದ್ಯನ ಬಂಡವಾಳ ಬಯಲಾಗಿದೆ.
ಸ್ಪಂದನಾ ಕ್ಲಿನಿಕ್ ಎಂಬ ಹೆಸರಿನಲ್ಲಿ ಸಾರ್ವಜನಿಕರಿಗೆ ಸಿಕಿತ್ಸೆ ನೀಡುತ್ತಿದ್ದು ಸ್ಥಳೀಯರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.