ಮೂಡಿಗೆರೆ: ವಿದ್ಯುತ್ ಸ್ಪರ್ಶದಿಂದ ರೈತ ಮೃತಪಟ್ಟಿರುವ ಘಟನೆ ಎತ್ತಿನ ಭುಜದ ಪಕ್ಕದ ಬ್ಯೆರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ನಾಗೇಶ್ ಗೌಡ(65 ) ಮೃತಪಟ್ಟ ರೈತನಾಗಿದ್ದು, ಮಂಗಳವಾರ ಮಧ್ಯಾಹ್ನ ಸುಮಾರು 12ಗಂಟೆ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಮಳೆ ಇದ್ದ ಕಾರಣ ಕಂಬದಿಂದ ಭೂಮಿಗೆ ಪ್ರವಹಿಸುತ್ತಿದ್ದ ವಿದ್ಯುತ್, ಗಮನಿಸದೆ ಕಂಬದ ಪಕ್ಕ ಹಾದು ಹೋಗುವಾಗ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಳೆ ಬಂದರೂ ಮೆಸ್ಕಾಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಹೀಗೆ ಆದರೆ ನಾವೆಲ್ಲಾ ಹೇಗೆ ಇಲ್ಲಿ ತಿರುಗಾಡುವುದು ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹಾಗೆ ಸ್ಥಳದಲೇ ಪರಿಹಾರ ನೀಡವಂತೆ ಪಟ್ಟು ಹಿಡಿದು ಶವ ತೆಗೆಯದಂತೆ ಗ್ರಾಮಸ್ಥರಿಂದ ಮೆಸ್ಕಾಂ ವಿರುದ್ದ ಭಾರಿ ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕೆ ಗೋಣಿಬೀಡು ಪೊಲೀಸರು ಆಗಮಿಸಿದ್ದು ಗ್ರಾಮಸ್ಥರನ್ನು ಸಂತೈಸಿ ಪರಿಸ್ಥಿತಿ ಹದಗೆಡದಂತೆ ಸುತ್ತಲೂ ಬಂದೋಬಸ್ತ್ ವಹಿಸಿದ್ದಾರೆ