ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಕೆರೆಯಾದ ಅಯ್ಯನಕೆರೆ ತುಂಬಿ ಹರಿಯುವ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ ಜಲ ಹೆಚ್ಚಿಸಿ ಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಭದ್ರ ಉಪ ಕಣಿವೆ ಯೋಜನೆಯ ನೀರನ್ನು ಸಹ ಅಯ್ಯನಕೆರೆಗೆ ಹರಿಸುವುದರಿಂದ ಸದಾಕಾಲವೂ ನೀರು ಹರಿಯುತ್ತದೆ ಎಂದು ಅಂದಾಜಿಸಿದ್ದು ಇದರಿಂದಾಗಿ ಬೆಲ್ಟಿಕೆರೆ ಕೆರೆ ಮತ್ತು ನಾಗೇನಹಳ್ಳಿ ಕೆರೆಗೆ ಹರಿಸಿದರೆ ನಾಗೇನಹಳ್ಳಿ,ಹುಲಿಕೆರೆ,ಪಿಳ್ಳೆನಹಳ್ಳಿ,ಕಂಚಗಾರನ ಹಳ್ಳಿ, ತಾಂಡ್ಯ ಮತ್ತು ಆಗ್ರಹಾರ ಭಾಗದಲ್ಲಿ ಅಂತರ್ ಜಲ ಹೆಚ್ಚಳವಾಗುತ್ತದೆ .ಇದರಿಂದಾಗಿ ಯಾವ ತೊಂದರೆ ಆಗುವುದಿಲ್ಲ ಯಾರು ಕೂಡ ಆತಂಕ ಪಡವುದು ಬೇಡ ಎಂದು ರೈತರು ಹೇಳುತ್ತಾರೆ.
ವೇದ ನದಿ ಅಕ್ಕ ಪಕ್ಕ ಇರುವ ರೈತರು ಕಡೂರು, ಪಂಚನಹಳ್ಳಿಯ ಭಾಗದ ರೈತರು ಹರಿಯುವ ನೀರನ್ನು ತಡೆಯಬಾರದು ವೇದನದಿ ತುಂಬಿ ಹರಿಯುವುದು ಬಲು ಕಷ್ಟ ಇಲ್ಲಿನ ಜನ ಮತ್ತು ಜಾನುವಾರುಗಳಿಗೆ ತೊಂದರೆ ಯಲ್ಲಿ ಇದ್ದು ಕುಡಿಯುವ ನೀರಿಗೂ ಕಷ್ಟ ಎಂದು ಆತಂಕ ಗೊಂಡು ಸಭೆ ಸೇರಿ ಪಂಚನಹಳ್ಳಿಯಿಂದ ಆಗ್ರಹಾರದವರೆಗೆ ಪಾದ ಯಾತ್ರೆ ಮಾಡಲು ನಿರ್ಧಾರ ಮಾಡಿದ್ದು ಯಾವುದೇ ಹೊಸ ಯೋಜನೆಗಳಿಗೆ ಅವಕಾಶ ಕೊಡಬಾರದು ಎನ್ನುತ್ತಿದ್ದಾರೆ.
ಒಟ್ಟಾರೆ ರೈತರಿಗೆ ನೀರಿನ ಚಿಂತೆ ಎರಡು ಕಡೆಯವರ ವಾದ ಅವರವರ ಅನುಕೂಲಕ್ಕೆ ಆದರೆ ಭದ್ರ ಉಪಕಣಿವೆ ಯೋಜನೆಯ ನೀರು ಬರುವುದರಿಂದ ಆತಂಕ ಪಡದೆ ಗೊಂದಲಕ್ಕೆ ಒಳಗಾಗದೆ ಸಾಧಕ_ ಬಾಧಕಗಳ ಬಗ್ಗೆ ಚರ್ಚೆ ನಡೆಸುವುದು ಒಳ್ಳೆಯದು.