Saturday, August 9, 2025
!-- afp header code starts here -->
Homeಜಿಲ್ಲಾಸುದ್ದಿಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣನವರ್‌, ಸಮೀರ್‌ ವಿರುದ್ಧ FIR: ಕಾರಣವೇನು?

ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣನವರ್‌, ಸಮೀರ್‌ ವಿರುದ್ಧ FIR: ಕಾರಣವೇನು?

ದಕ್ಷಿಣ ಕನ್ನಡ: ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್‌ ಮಟ್ಟಣನವರ್‌ , ಮಹೇಶ್‌ ಶೆಟ್ಟಿ ತಿಮರೋಡಿ , ಯೂಟ್ಯೂಬರ್‌ ಸಮೀರ್‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವರದಿಗಾರ ಹರೀಶ್‌ ಅವರ ದೂರಿನಂತೆ ಬಿಎನ್‌ಎಸ್‌ ಸೆಕ್ಷನ್‌ 115(2), 189(2), 191(2), 351(2), 352, 190 ಅಡಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್‌ ಮಟ್ಟಣನವರ್‌ (ಎ1), ಮಹೇಶ್‌ ಶೆಟ್ಟಿ ತಿಮರೋಡಿ(ಎ2) ಯೂಟ್ಯೂಬರ್‌ ಸಮೀರ್‌(ಎ3), ಜಯಂತ್‌(ಎ4) ಇತರರ ಹೆಸರನ್ನು ಉಲ್ಲೇಖಿಸಲಾಗಿದೆ

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಬುಧವಾರ ಹಲ್ಲೆ ನಡೆದ ವಿಚಾರ ತಿಳಿದ ಹಿನ್ನೆಲೆಯಲ್ಲಿ ನಾನು ಹಲ್ಲೆಗೆ ಒಳಗಾದವರನ್ನು ಮಾತನಾಡಿಸಲು ಉಜಿರೆಯ ಬೆನಕ ಆಸ್ಪತ್ರೆಗೆ ಬಂದಿದ್ದೆ. ಈ ಸಂದರ್ಭದಲ್ಲಿ ಗಿರೀಶ್‌ ಮಟ್ಟಣವರ್‌ ಬಳಿ ಬೈಟ್‌ ಕೊಡುವಂತೆ ಕೇಳಿದಾಗ ನನ್ನ ಮೇಲೆ ಬೈಯಲು ಆರಂಭಿಸಿದರು.

ಈ ವೇಳೆ ಅಲ್ಲೇ ಇದ್ದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಅವರ ಗ್ಯಾಂಗ್‌ ಸದಸ್ಯರು ಹಲ್ಲೆ ಮಾಡಿದ್ದಾರೆ. ಈ ವೇಳೆ ಕೀಳು ಭಾಷೆಯಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಮೀರ್‌ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಪೊಲೀಸರು ನನ್ನನ್ನು ರಕ್ಷಣೆ ಮಾಡಿ ಒಳಗೆ ಕೂರಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಜಯಂತ್‌ ಟಿ ನನ್ನ ವಿಡಿಯೋ ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -!-- afp header code starts here -->

Most Popular

Recent Comments

error: Content is protected !!