Saturday, February 7, 2026
Homeಜಿಲ್ಲಾಸುದ್ದಿದಾರದಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಶುಭ ಕೋರಿದ ಮಾಜಿ ಸಚಿವೆ ಮೋಟಮ್ಮ

ದಾರದಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಶುಭ ಕೋರಿದ ಮಾಜಿ ಸಚಿವೆ ಮೋಟಮ್ಮ

ಮೂಡಿಗೆರೆ : ಡೆಲ್ಲಿಯಲ್ಲಿ ಸದ್ದು ಮಾಡಿದ ಹಳ್ಳಿ ಅದುವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿ ದಾರದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ಹಳೇ ವಿದ್ಯಾರ್ಥಿನಿ ಹಾಗೂ ಮಾಜಿ ಸಚಿವೆ ಶ್ರೀಮತಿ ಮೊಟ್ಟಮ್ಮ ಶುಭಾಶಯ ತಿಳಿಸಿದ್ದಾರೆ.

ದಿನಾಂಕ 1/3/26 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಲೆಯ ಆಚರಣ ಸಮಿತಿಗೆ ಪತ್ರದ ಮೂಲಕ ಶುಭ ಹಾರೈಸಿದ್ದಾರೆ.

ದಾರದಹಳ್ಳಿ ಪ್ರಾಥಮಿಕ ಶಾಲೆಗೆ 124 ವರ್ಷ ತುಂಬಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರವಾಗಿದೆ. ಶಾಲೆಯನ್ನು ನಿರ್ಮಿಸಿ ಬೆಳೆಸಿದ ಹಿರಿಯರಿಗೂ. ಶಿಕ್ಷೆಕರಿಗೂ ವೈಯಕ್ತಿಕ ಕೃತಜ್ಞಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಹಾಗೆಯೇ ಶಾಲೆಗೆ ಸಂಬಂದಿಸಿದ ಸಲಕರಣೆಗಳನ್ನು ನೀಡಿದ ಎಲ್ಲಾ ಶಿಕ್ಷಕ ವೃಂದದವರಿಗೆ ಗ್ರಾಮಸ್ಥರಿಗೆ ಅಭಿನಂದಿಸಿದ್ದಾರೆ

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ, ಇದಕ್ಕೆ ರಾಜಕೀಯ, ಸಾಮಾಜಿಕ, ವೈದಕೀಯ ಇನ್ನಿತರೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವರು ಪ್ರತ್ಯಕ್ಷ ಸಾಕ್ಷಿಯಾಗಿದೆ

ಅದಲ್ಲದೆ ಆ ಕಾಲದಲ್ಲಿ ಶ್ರಮಿಸಿ, ಸಹಾಯ ಮಾಡಿದ ಗುರುಗಳು ಡಿ.ಬಿ. ಚಂದ್ರೆಗೌಡ ಅವರು ಹೆಚ್ಚಿನ ಸಹಕಾರ ಮಾಡಿರುವುದು ನನಗೆ ಹೆಮ್ಮೆ ಇದೆ,ಶಾಲೆಯನ್ನು ಉನ್ನತ ಮಟ್ಟಕ್ಕೆ ಡಿ. ಬಿ.ಬಿಳಿಗೌಡ ಹಾಗೂ ಅಲ್ಲಿ ಶಿಕ್ಷಣ ನೀಡಿದ ಮತ್ತು ಗ್ರಾಮಸ್ಥರನ್ನು ಸ್ಮರಿಸಿ ಕೃತಜ್ಞತೆ ತಿಳಿಸುತ್ತೇನೆ. 124 ವರ್ಷ ತುಂಬಿದ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸುತ್ತೇನೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಸಿದ್ದಾರೆ.

ವರದಿ:ಪುನೀತ್ ಕಡಿದಾಳು
948381948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!