ಮೂಡಿಗೆರೆ: ತಾಲೂಕಿನ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಂ. ಅಬ್ದುಲ್ ರೆಹಮಾನ್ ಅವರು ಗುರುವಾರ ಅನಾರೋಗ್ಯ ನಿಮಿತ್ತ ನಿಧನರಾಗಿದ್ದಾರೆ

ರೆಹಮಾನ್ ಅವರು ಮಂಗಳೂರಿನ ವೆಸ್ಟ್ ಲೈನ್ ಬಿಲ್ಡರ್ ಸಂಸ್ಥೆಯ ಮಾಲೀಕರಾಗಿದ್ದು, ಈ ಹಿಂದೆ ಮೂಡಿಗೆರೆ ಪುರಸಭಾ ಅಧ್ಯಕ್ಷರಾಗಿ ಹಾಗೂ ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ರೆಹಮಾನ್ ಅವರ ನಿಧನಕ್ಕೆ ಮೂಡಿಗೆರೆ ಶಾಸಕಿ ನಯನ ಮೊಟಮ್ಮ, ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಬಿಬಿ ನಿಂಗಯ್ಯ, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಡಿ.ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ .ಎಸ್. ಜಯರಾಮ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ