ಮೂಡಿಗೆರೆ: ಸರ್ಕಾರಿ ಫ್ರೌಢಶಾಲೆ ಚಿನ್ನಿಗಾ ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಮುದ್ರೇಮನೆ ಕಾಫಿಕ್ಯೂರಿಂಗ್ ಸಿಬ್ಬಂದಿ ವರ್ಗದವರು ಉಚಿತವಾಗಿ ಕಲಿಕಾ ಸಾಮಾಗ್ರಿ ಮತ್ತು ಶಾಲಾ ಆವರಣದ ಗೋಡೆಗೆ ಬಣ್ಣ ಹಾಗೂ ಬಣ್ಣಹೊಡೆಯುವ ಪರಿಕರಗಳನ್ನು ವಿತರಿಸಿದ್ರು.
ಈ ವೇಳೆ ಮಾತನಾಡಿದ SDMC ಅಧ್ಯಕ್ಷರಾದ ಸುಂದ್ರೇಶ್ ಹೊಯ್ಸಳಲು ನಮ್ಮ ಶಾಲೆಗೆ ಈ ರೀತಿಯ ಸಮಾಜಸೇವೆಗೆ ಮುಂದಾಗಿರುವುದು ಹಾಗೂ ಶಾಲೆಗೆ ಮುಂದಿನ ದಿನದಲ್ಲಿ ಏನಾದರೂ ಕೆಲಸಮಾಡಿಸುತ್ತೇವೆ ಎಂದು ಹೇಳಿದರು. ಗೆ ನಮ್ಮ ಶಾಲೆಯ ಪರವಾಗಿ ಮುದ್ರೇಮನೆ ಕಾಫಿಕ್ಯೂರಿಂಗ್ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರು ಬಿ,ರಾಮು ರವರು ಮಾತನಾಡಿ ನಮ್ಮ ಸರ್ಕಾರಿ ಶಾಲೆ ಬೆಳವಣಿಗೆ,ಅಭಿವೃದ್ಧಿ ಕಾಣಬೇಕಾದರೆ ಸಮಾಜಸೇವೆ ಮನಸ್ಸಿದ್ದರೆ ಮಾತ್ರ ಸಾಧ್ಯ ನಮ್ಮ ಶಾಲೆಯ ಆವರಣ ಶುಚಿಯಾಗಿಡಲು ಚಿಂತನ ಫೌಂಡೇಷನ್ ಹಾಗು ಗೂಂಜ್ ಸಂಸ್ಥೆಯಿಂದಾ ಅಧ್ಯಕ್ಷರು ಪೂವಪ್ಪ ರವರು ಸಹಕಾರ ಮಾಡಿದ್ದಾರೆ. ಅದೇ ಭಾವನೆಯಲ್ಲಿ ಇಂದು ಮುದ್ರೇಮನೆ ಕಾಫಿಕ್ಯೂರಿಂಗ್ ಯುವಕರು ಸಿಬ್ಬಂದಿ ವರ್ಗದವರು ಸಹಾಯ ಮಾಡಿರುವುದು ನಮ್ಮ ಶಾಲೆಯ ಮಕ್ಕಳ ಸಂಭ್ರಮ ಹೆಚ್ಚಿಸಿದೆ ಎಂದರು.
ಈ ಸಂಧರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಲೋಕೇಶ್,ತ್ರೀವೇಣಿ ಎಸ್,ಸೋಮಶೇಖರಯ್ಯ,ಶೇಖರ್ ಗೌಡ ಸೇರಿದಂತೆ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.
