Friday, March 13, 2026
Homebig breakingಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತಟ್ಟಿದ ಗ್ಯಾಸ್ ವ್ಯತ್ಯಯ ಬಿಸಿ: ಪ್ರಸಾದ ತಯಾರಿಕೆಗೆ ಕಟ್ಟಿಗೆ ಬಳಕೆ!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತಟ್ಟಿದ ಗ್ಯಾಸ್ ವ್ಯತ್ಯಯ ಬಿಸಿ: ಪ್ರಸಾದ ತಯಾರಿಕೆಗೆ ಕಟ್ಟಿಗೆ ಬಳಕೆ!

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರ ಮತ್ತು ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿದಿನದಂತೆ ಭೋಜನ ಪ್ರಸಾದ ಮತ್ತು ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಈಗಾಗಲೇ ಒಂದು ವಾರಕ್ಕೆ ಬೇಕಾದ ಗ್ಯಾಸ್ ಶೇಖರಿಸಲ್ಪಟ್ಟಿದ್ದು, ಬುಧವಾರ ಕೂಡ ಶ್ರೀ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ದರಿಂದ ಭಕ್ತರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ದೇವಳದ ಆಡಳಿತ ತಿಳಿಸಿದೆ.

ಗ್ಯಾಸ್ ಉಳಿಕೆಗೆ ಕ್ರಮ: ಯುದ್ಧದ ಕಾರಣದಿಂದ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಕಾರಣದಿಂದ ಮಿತವಾಗಿ ಗ್ಯಾಸ್ ಬಳಸಲು ದೇವಳದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ದೇವಳದಲ್ಲಿ ದಿನವಾಹಿ ನೀಡುತ್ತಿದ್ದ ವಿವಿಧ ರೀತಿಯ ಉಪಹಾರ ತಿನಿಸುಗಳಿಗೆ ಬದಲಾಗಿ, ಎರಡು ದಿನಕ್ಕೊಮ್ಮೆ ಅವಲಕ್ಕಿ ಮೊಸರು ಹಾಗೂ ಉಳಿದ ದಿನ ಹೆಸರು ಕಾಳು, ಉಪ್ಪಿಟ್ಟು ವಿತರಣೆ ನಡೆಯಲಿದೆ.

ಅದೇ ರೀತಿ, ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಚ್ಚುವರಿ ತಯಾರಿಸುತ್ತಿದ್ದ ಪಲ್ಯಕ್ಕೆ ಬದಲಾಗಿ ದೇವಳದ ಪ್ರಸಿದ್ಧ ಬೋಜನ ಖಾದ್ಯ ಚಟ್ನಿಯನ್ನು ಮಾತ್ರ ತಯಾರಿಸಿ ವಿತರಿಸಲಾಗುತ್ತದೆ. ಆದ್ದರಿಂದ ಭಕ್ತರಿಗೆ ಭೋಜನ ಪ್ರಸಾದ ಹಾಗೂ ಉಪಹಾರ ತದೇಕ ಪ್ರಕಾರವಾಗಿ ವಿತರಿಸಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!