ಕೊಪ್ಪ: ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕೆಮ್ಮಣ್ಣು ಉಕ್ಕಿ ಬಂದು ರೋಡ್ ಇಲ್ಲದಂತಾಗಿ ರಸ್ತೆಯಲ್ಲೆಲ್ಲಾ ಮಣ್ಣು ತುಂಬಿ ಗುಂಡಿಗಳಾಗಿ ನೀರು ತುಂಬಿದ್ದರಿಂದ ರಸ್ತೆ ಕಾಣದೆ ಶಾಲೆಗೆ ಹೋಗಲು ಮಕ್ಕಳು ತುಂಬಾ ಕಷ್ಟಪಡುವ ಸ್ಥಿತಿ ಒದಗಿಬಂದಿದ್ದು ಈ ಹಿನ್ನೆಲೆಯಲ್ಲಿ ಓರ್ವ ಬಾಲಕಿ ಧೈರ್ಯ ತಂದುಕೊಂಡು ಶಾಲೆಗೆ ಹೋಗಲಾಗದೇ ಇರುವ ರಸ್ತೆ ಸ್ಥಿತಿ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ.

ಹೌದು .. ಕೊಪ್ಪ ತಾಲ್ಲೂಕಿನ ಮಲಗಾರು ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಹಾಗೆ ಕೆಸರುಮಯ ರೋಡ್ ಬಗ್ಗೆ ಫೋಟೋ ಕೂಡ ಕಳುಹಿಸಿಕೊಟ್ಟು ರಸ್ತೆ ಸರಿಪಡಿಸಲು ಮನವಿ ಮಾಡಿರುವ ಘಟನೆ ಕೊಪ್ಪದಲ್ಲಿ ಕಂಡುಬಂದಿದೆ.
ಲೋಕನಾಥಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಓದುತ್ತಿದ್ದು, ತಮ್ಮ ಗ್ರಾಮದ ಮುಖ್ಯ ಸಮಸ್ಯೆ ಇದಾಗಿದೆ. ಶಾಲೆ ಮತ್ತು ಮನೆಗೆ ನಾಲ್ಕು ಕಿಲೋ ಮೀಟರ್ ದೂರವಿದೆ. ರಸ್ತೆ ಕೆಟ್ಟ ಸ್ಥಿತಿಯಲ್ಲಿದ್ದು, ದಾರಿಯುದ್ದಕ್ಕೂ ಕೆಸರು ಮತ್ತು ಹೊಂಡದ ರಸ್ತೆಯಾಗಿದೆ. ಮಳೆಗಾಲದಲ್ಲಿ ಕೆಸರು ನೀರು ರಸ್ತೆಗೆ ಹರಿದು ಬರುವುದರಿಂದ ಶಾಲೆಗೆ ಹೋಗುವುದು ಹರಸಾಹಸವಾಗಿದೆ ಎಂದು ಪತ್ರದಲ್ಲಿ ಸ್ವವಿವರವಾಗಿ ಇಲ್ಲಿನ ದು:ಸ್ಥಿತಿ ಬಗ್ಗೆ ಬರೆದಿದ್ದಾಳೆ.

ಹಾಗೆ ನಾನು ಐಎಎಸ್ ಓದುವ ಕನಸು ಹೊಂದಿರುವೆ ಆದರೆ ಕಳಪೆ ರಸ್ತೆಯ ಕಾರಣದಿಂದ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ. ದಯವಿಟ್ಟು ಗ್ರಾಮದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಬೇಡಿಕೊಳ್ಳುತ್ತೇನೆ ಹಾಗೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ ಎಂದು ಪತ್ರದಲ್ಲಿ ವಿದ್ಯಾರ್ಥಿನಿ ಸಿಂಧೂರ ತಿಳಿಸಿದ್ದಾಳೆ