Monday, March 30, 2026
Homeಜಿಲ್ಲಾಸುದ್ದಿಗೋಣಿಬೀಡು:ಗ್ರಾ. ಪಂ. ಸುತ್ತಾಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ: ಸದಸ್ಯ ಪ್ರಹ್ಲಾದ್

ಗೋಣಿಬೀಡು:ಗ್ರಾ. ಪಂ. ಸುತ್ತಾಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ: ಸದಸ್ಯ ಪ್ರಹ್ಲಾದ್

ಮೂಡಿಗೆರೆ: ಪಟ್ಟಣದ ಗೋಣಿಬೀಡು ಪಂಚಾಯಿತಿ ಸುತ್ತಾಮುತ್ತ ಪ್ರದೇಶಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

ಈ ಕುರಿತು ಮಾತನಾಡಿದ ಗ್ರಾ. ಪಂ. ಸದಸ್ಯ ಪ್ರಹ್ಲಾದ್ (ಕುಟ್ಟಿ ), ನಿರ್ದಿಷ್ಟ ಪ್ರದೇಶಗಳನ್ನು ಹೊರತು ಪಡಿಸಿ ಬೇರೆ ಬೇರೆ ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಕಿ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋಣಿಬೀಡು ಗ್ರಾಮ ಪಂಚಾಯಿತಿ ಸುತ್ತ ಮುತ್ತ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲಾಗುವುದು. ಹಾಗೆ ಇಂದು ಗೋಣಿಬೀಡು ಪಂಚಾಯಿತಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರ್ದಿಷ್ಟ ಪ್ರದೇಶಗಳನ್ನ ಹೊರತು ಪಡಿಸಿದ ಬೇರೆ ಜಾಗಗಳಲ್ಲಿ ಬಿಸಾಕಿದ ಕಸವನ್ನು ಸ್ವಚ್ಛ ಮಾಡಿಸಿರುವುದಾಗಿ ತಿಳಿಸಿದರು

ಅದೇ ರೀತಿ ಮನಬಂದಂತೆ ಕಸ ಬಿಸಾಕುವುದರಿಂದ ಮಾರಕ ಕಾಯಿಲೆಗಳಿಗೆ ಹರಡುತ್ತವೆ ಇಂತಹ ಕಾಯಿಲೆ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕಳೆದ ಹಲವಾರು ದಶಕಗಳಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗಳಿಗೆ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಸ್ಥಳ ದೊರಕದ ಹಿನ್ನೆಲೆ, ಪ್ರತಿದಿನ ಶೇಖರಣೆಯಾಗುವ ತ್ಯಾಜ್ಯ ಸ್ಥಳದ ಅಭಾವವಿದ್ದು ಶೀಘ್ರದಲ್ಲೇ ದೊಡ್ಡ ವಿಸ್ತೀರ್ಣದ ಜಾಗ ಗುರುತಿಸುವುದಾಗಿ ತಿಳಿಸಿದರು

ತ್ಯಾಜ್ಯದ ದುರ್ನಾತದಿಂದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ಪರಿಸ್ಥಿತಿ ಒದಗಿದ್ದು ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿಳುವ ಸಾಧ್ಯತೆ ಅಧಿಕವಾಗಿತ್ತದೆ ಇದನ್ನು ಗಮನಿಸಿ ಸದಾ ಜನಜಂಗೂಳಿ ಪ್ರದೇಶವಾದ ನಮ್ಮ ಪಂಚಾಯತ್ ಸದಾ ಸ್ವಚ್ಛ ವಾಗಿಡಲು ಹೆಚ್ಚಿನ ಗಮನ ನೀಡುತ್ತೇನೆ ಎಂದರು. ಇವರ ಜವಾಬ್ದಾರಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!