Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಸರ್ಕಾರದಿಂದ ಮಂಜೂರಾದ ಮನೆ ನೆಲಸಮ: RFO ಕೃಷ್ಣ ವಿರುದ್ಧ ಬಡ ಕುಟುಂಬದ ಕಿಡಿ!

ಸರ್ಕಾರದಿಂದ ಮಂಜೂರಾದ ಮನೆ ನೆಲಸಮ: RFO ಕೃಷ್ಣ ವಿರುದ್ಧ ಬಡ ಕುಟುಂಬದ ಕಿಡಿ!

ಸಕಲೇಶಪುರ : ಸರ್ಕಾರದಿಂದ ಆಶ್ರಯ ಯೋಜನೆಯಡಿ ಮಂಜೂರಾದ ಮನೆಯನ್ನು ಜೆಸಿಬಿ ಬಳಸಿ ನಾಶ ಮಾಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಮರಡಿಕೆರೆ ಗ್ರಾಮದ ಸಂತ್ರಸ್ತ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ತಾಲೂಕಿನ ಯಸಳೂರು ಹೋಬಳಿ ಮರಡಿಕೆರೆಯ ಸರ್ವೆ ನಂ.361ರಲ್ಲಿ ಸರಕಾರದ ಆಶ್ರಯ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದ ಪ್ರಿಯಾ ಡಿ.ಕೆ. ಎಂಬವರ ಮನೆಗೆ ಜುಲೈ 4ರಂದು ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಈ ಮನೆಯು 2021-22ನೇ ಸಾಲಿನಲ್ಲಿ ಅಶ್ರಯ ಯೋಜನೆಯಡಿ ಮಂಜೂರಾಗಿತ್ತು. ಹಂತ ಹಂತವಾಗಿ ನಾಲ್ಕು ಬಾರಿಗೆ ಅನುದಾನ ಬಿಡುಗಡೆಯಾಗಿ ಮನೆ ನಿರ್ಮಾಣ ಪೂರ್ಣ ಹಂತದಲ್ಲಿ ಇತ್ತು. ಕುಟುಂಬ ವಾಸಕ್ಕೆ ತೆರಳಬೇಕೆನ್ನುತ್ತಿದ್ದ ಸಂಧರ್ಭದಲ್ಲಿ ಈ ದೌರ್ಜನ್ಯ ಸಂಭವಿಸಿದೆ.

ಮನೆಯು ಅರಣ್ಯ ಭೂಮಿಯೊಳಗೆ ನಿರ್ಮಾಣವಾಗಿದೆ ಎಂಬ ಕಾರಣ ನೀಡಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆ ನೆಲಸಮ ಕುಟುಂಬದವರು ಆರೋಪಿಸಿದ್ದಾರೆ. ಯಸಳೂರು ವಲಯದ ಆರ್.ಎಫ್ ಓ ಕೃಷ್ಣರವರ ವಿರುದ್ಧ ದಬ್ಬಾಳಿಕೆಯ ಆರೋಪ ಕೇಳಿ ಬಂದಿದ್ದು, ಈ ಪ್ರದೇಶದಲ್ಲಿಯೇ ಇನ್ನು ಕೆಲವರು ಮನೆ ಕಟ್ಟಿಕೊಂಡಿದ್ದರು ಸಹ ವಿಶೇಷವಾಗಿ ಪ್ರಿಯಾ ಮತ್ತು ಶೋಭರಾಜ್ ದಂಪತಿಯ ಮನೆ ಮಾತ್ರವೇಕೆ ನೆಲಸಮ ಮಾಡಲಾಗಿದೆ ಎಂಬ ಪ್ರಶ್ನೆ ಮೂಡಿಸಿದೆ. ಮನೆಯ ಮಾಲಕಿ ಪ್ರಿಯಾ ಹೆರಿಗೆಗಾಗಿ ತವರು ಮನೆಗೆ ತೆರಳಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಮಾಹಿತಿ ನೀಡದೆ ಮನೆ ದ್ವಂಸಗೊಳಿಸಿರುವುದು ಖಂಡನೀಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆ ಕೆಡವಿರುವುದನ್ನು ಖಂಡನೆ ಮಾಡಲು ಸ್ಥಳೀಯರು ಮುಂದಾಗಿದಕ್ಕೆ ಅರಣ್ಯ ಇಲಾಖೆಯವರು ಗ್ರಾಮಸ್ಥರು ಅಕ್ರಮವಾಗಿ ಮರ ಕಡಿಯಲು ಮುಂದಾಗಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ. ಇದು ಆರ್.ಎಫ್.ಓ ಕೃಷ್ಣರವರ ದೌರ್ಜನ್ಯ ತೋರಿಸುತ್ತಿದೆ. ಈ ಸಂಭಂದ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಸಂತ್ರಸ್ತ ಕುಟುಂಬ ಹಾಗೂ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಘಟನೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಭಂದ ಸೂಕ್ತ ತನಿಖೆ ಮತ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಬಲಾಡ್ಯರು ಒತ್ತುವರಿ ಮಾಡಿದ್ದು ಇವರ ಮೇಲೆ ಇಲ್ಲದ ಕ್ರಮ ಬಡ ದಲಿತನ ಮೇಲೆಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!