Sunday, March 29, 2026
Homeಜಿಲ್ಲಾಸುದ್ದಿಹಸಿರು ಫೌಂಡೇಷನ್ ವತಿಯಿಂದ ಲಕ್ಷ ಸಸಿ ನೆಡುವ ಕಾರ್ಯಕ್ರಮ: ರತನ್ ಊರುಬಗೆ ತಂಡಕ್ಕೆ ಸಾರ್ವಜನಿಕರ ಶ್ಲಾಘನೆ

ಹಸಿರು ಫೌಂಡೇಷನ್ ವತಿಯಿಂದ ಲಕ್ಷ ಸಸಿ ನೆಡುವ ಕಾರ್ಯಕ್ರಮ: ರತನ್ ಊರುಬಗೆ ತಂಡಕ್ಕೆ ಸಾರ್ವಜನಿಕರ ಶ್ಲಾಘನೆ

ಚಿಕ್ಕಮಗಳೂರು/ ಮೂಡಿಗೆರೆ: ಹಸಿರು ಫೌಂಡೇಷನ್ ವತಿಯಿಂದ ಇಂದು ಮೂಡಿಗೆರೆ ತಾಲ್ಲೂಕು ಕೆಸವಳಲು ಕೂಡಿಗೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಈ ವೇಳೆ ಹಸಿರು ಫೌಂಡೇಶನ್ ಸದಸ್ಯರು, ಕೋಟ್ಯಂತರ ಜನರಿಗೆ ಹಾಗೂ ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ಆಸರೆಯಾಗಿರುವ ಹೇಮಾವತಿ ನದಿಯ ತಟದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಹೇಮಾವತಿ ನದಿ ಪ್ರಾಮುಖ್ಯತೆ ಎಲ್ಲರಿಗೂ ತಿಳಿಸುವ ಕಾರ್ಯ ಮಾಡಿದ್ರು.

ಇನ್ನೂ ಇದೆ ವೇಳೆ ಹಸಿರು ಫೌಂಡೇಷನ್ ಅಧ್ಯಕ್ಷ, ರತನ್ ಊರುಬಗೆ ಮಾತನಾಡಿ ವನಮಹೋತ್ಸವ ಕಾರ್ಯಕ್ರಮ ನಿರಂತರವಾಗಿ ಸಾಗಲಿದ್ದು ಫೌಂಡೇಷನ್ ವತಿಯಿಂದ ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಅಭೂತಪೂರ್ವವಾಗಿ ಬೆಂಬಲ ಸಿಗುತ್ತಿದ್ದು, ಶಾಲೆ ಕಾಲೇಜುಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳಲ್ಲಿ ನಿರಂತರವಾಗಿ ವನಮಹೋತ್ಸವ ಕಾರ್ಯಕ್ರಮ ನಡೆಯಲು ಪರಿಸರ ಪ್ರೇಮಿಗಳು ಹಾಗೂ ಸಂಸ್ಥೆಯ ನಿರ್ದೇಶಕರ ಬೆಂಬಲ ಕೂಡ ಮುಖ್ಯವಾಗಿ ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಸವಳಲು ಕೂಡಿಗೆ ಮುಖ್ಯಸ್ಥರು ಹಾಗೂ ದಾರದಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ಸಿದ್ದೇಶ್, ಹರ್ಷ ,ಪ್ರಸನ್ನ ಕೆಸವಳಲು, ಪುಟ್ಟಸ್ವಾಮಿ, ಫೌಂಡೇಷನ್ ನಿರ್ದೇಶಕ ಸಚಿನ್ ದುರ್ಗದಹಳ್ಳಿ ಮತ್ತಿತರರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!