ಹಾಸನ: ಮನೆಯ ಬಾಗಿಲು ಮುರಿದು ಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 5,000 ರೂ. ನಗದು ದೋಚಿರುವ ಘಟನೆ ಬೇಲೂರು ತಾಲೂಕಿನ ಹಳೇಬೀಡಿನ ಕಲ್ಲುಮಠ ಬೀದಿಯಲ್ಲಿ ನಡೆದಿದೆ.
ಹೌದು .. ಅಲ್ಲಿನ ನಿವಾಸಿ ಮಂಜಪ್ಪ ಮತ್ತು ಪತ್ನಿ ಪ್ರೇಮಲೀಲಾ ಅವರು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಜಾವಗಲ್ ಸರ್ಕಲ್ನಲ್ಲಿರುವ ತಾವು ನಡೆಸುತ್ತಿರುವ ಮೆಡಿಕಲ್ಗೆ ಹೋಗಿದ್ದರು. ಈ ವೇಳೆ ಈ ಕಳ್ಳತನ ನಡೆದಿದೆ.
ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ, ಮನೆಯ ಬಾಗಿಲನ್ನು ಕಳ್ಳರು ಒಡೆದು, ಬೀರುಗಳಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ, 3 ಗ್ರಾಂ. ತೂಕದ ಗುಂಡಿನ ಚೈನ್, 10 ಗ್ರಾಂ. ತೂಕದ ಬೆಳ್ಳಿಯ ಪೆಂಡೆಂಟ್, 2 ಉಂಗುರ, 6 ಗ್ರಾಂ. ತೂಕದ 1 ಮೂಗುತಿ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
