Wednesday, February 11, 2026
Homeಜಿಲ್ಲಾಸುದ್ದಿಹಾಸನ: 25ನೇ ವರ್ಷದ ಬೆಳ್ಳಿ ಮಹೋತ್ಸವ: IPS ಅಧಿಕಾರಿ ಬೋರಲಿಂಗಯ್ಯ ವಿಶೇಷ ಅತಿಥಿಯಾಗಿ ಭಾಗಿ!

ಹಾಸನ: 25ನೇ ವರ್ಷದ ಬೆಳ್ಳಿ ಮಹೋತ್ಸವ: IPS ಅಧಿಕಾರಿ ಬೋರಲಿಂಗಯ್ಯ ವಿಶೇಷ ಅತಿಥಿಯಾಗಿ ಭಾಗಿ!

ಹಾಸನ: ವಿದ್ಯಾನಗರ ಬುದ್ಧಮಾರ್ಗದಲ್ಲಿರುವ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಹಾಗೂ ವಿದ್ಯಾನಗರ ಗೆಳೆಯರ ಹಾಗೂ ಯುವಕರ ಬಳಗದ ಆಶ್ರಯದಲ್ಲಿ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿ ಮಹೋತ್ಸವದಲ್ಲಿ ಮೈಸೂರು ಪೊಲೀಸ್ ಶ್ರೇಣಿಯ ಮಹಾನಿರೀಕ್ಷಕರಾದ ಬೋರಲಿಂಗಯ್ಯ ಐಪಿಎಸ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಅವರಿಗೆ ಸನ್ಮಾನ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಯುವಕರು ಭಾಗವಹಿಸಿದ್ದರು. ಸಮಿತಿಯು ಕಳೆದ 25 ವರ್ಷಗಳಿಂದ ಗಣೇಶೋತ್ಸವವನ್ನು ಶಿಸ್ತಿನಿಂದ ಹಾಗೂ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸುತ್ತಿದ್ದು, ಈ ಬಾರಿ ಬೆಳ್ಳಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು ಬೋರಲಿಂಗಯ್ಯ ಐಪಿಎಸ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!