ಹಾಸನ: ನಗರದ ಗಾಂಧಿ ಬಜಾರ್ ನಲ್ಲಿ ಚಿನ್ನ ಖರೀದಿ ಮಾಡಲೆಂದು ಬಂದ ಚಾಲಾಕಿ ಮಹಿಳೆಯೊಬ್ಬಳು ಎರಡೂವರೇ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾಳೆ.

ಅಪರಿಚಿತ ಮಹಿಳೆ ಕೆಂಪು ಚೂಡಿದಾರ್ ಹಳದಿ ವೇಲ್ ಧರಿಸಿದ್ದು ಉಷಾ ಎಂಬುವವರ ಸುಪ್ರಿಯಾ ಎಂಬ ಹೆಣ್ಣು ಮಗುವನ್ನು ಯಾರಿಗೂ ತಿಳಿಯದಂತೆ ಎತ್ತಿಕೊಂಡು ಹೋಗಿದ್ದಾಳೆ. ಈ ದೃಶ್ಯ ಗಾಂಧಿ ಬಜಾರ್ ನ ಸಿಸಿಟಿವಿಯಲ್ಲಿ ಕಂಡುಬಂದಿದೆ.
ಹೀಗಾಗಿ ಯಾರೇ ಆ ಮಗುವನ್ನು ಹಾಗೂ ಹೆಂಗಸನ್ನಿ ನೋಡಿದರೆ ಹಾಸನ ನಗರ ಠಾಣೆ 08172-268333, 9480804745 ಮತ್ತು ತುರ್ತು ಸೇವೆ 112 ಗೆ ಕರೆ ಮಾಡಿ ಮಾಹಿತಿ ತಿಳಿಸಲು ಕೋರಲಾಗಿದೆ.