ಹಾಸನ: ಕಾನ್ವೆಂಟ್ ಮುಗಿಸಿಕೊಂಡು ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿನ್ನೆಲೆ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಬಾಲಕನಿಗೆ ಗಂಭೀರ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಂಡಿಕೊಪ್ಪಲು ಗೇಟ್ ಬಳಿ ಗುರುವಾರ ಸಂಜೆ ನಡೆದಿದೆ.
ದೀಕ್ಷಿತ್‌ಗೌಡ (4) ಮೃತ ಬಾಲಕನಾಗಿದ್ದು, ಸಾರ್ಥಕ್ (4) ಗಂಭೀರವಾಗಿ ಗಾಯಗೊಂಡಿರುವ ಬಾಲಕ ಮಂಡಿಕೊಪ್ಪಲು ಗೇಟ್‌ನಲ್ಲಿರುವ ಗಾರ್ಡವಿನ್ ಕಾನ್ವೆಂಟ್‌ನಲ್ಲಿ ಎಲ್‌ಕೆಜಿ ಓದುತ್ತಿರುವ ದೀಕ್ಷಿತ್‌ಗೌಡ ಹಾಗೂ ಸಾರ್ಥಕ್
ಕಾನ್ವೆಂಟ್ ಮುಗಿದ ಮೇಲೆ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಬೈಕ್‌ನಲ್ಲಿ ಕೂರಿಸಿಕೊಂಡಿದ್ದ ತಾತ ಚೋಳರಾಜು ಎರಡು ಕಡೆ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯಾ ಎಂದು ನೋಡುತ್ತಿದ್ದ ಚೋಳರಾಜುKA-02-HM-9313 ನಂಬರ್‌ನ ಬೈಕ್‌ನಲ್ಲಿ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಚೋಳರಾಜು ಈ ವೇಳೆ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ KA-54-8690 ನಂಬರ್ ಗೂಡ್ಸ್ ವಾಹನ
ಸಾರ್ಥಕ್‌ಗೆ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೋಳರಾಜುಗೂ ಕೈ ಮುರಿತ, ಸಣ್ಣ-ಪುಟ್ಟ ಗಾಯಗಳಾಗಿವೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
