Monday, April 13, 2026
Homeಕ್ರೈಮ್ಹಾಸನ: ಸಿನಿಮೀಯ ಶೈಲಿಯ ವಿಚಿತ್ರ ಘಟನೆ: ಪತಿ & ಮಗುವನ್ನು ಮರೆತು ಪ್ರಿಯಕರನ ಜೊತೆ ಮದುವೆಯಾದ...

ಹಾಸನ: ಸಿನಿಮೀಯ ಶೈಲಿಯ ವಿಚಿತ್ರ ಘಟನೆ: ಪತಿ & ಮಗುವನ್ನು ಮರೆತು ಪ್ರಿಯಕರನ ಜೊತೆ ಮದುವೆಯಾದ ಮಹಿಳೆ!

ಹಾಸನ: ಜಿಲ್ಲೆಯಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆಯೊಂದು ನಡೆದಿದ್ದು, ಎಂಟು ವರ್ಷಗಳ ಸಂಸಾರ ಹಾಗೂ ಮಗುವನ್ನು ಮರೆತು ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಚಲಿಸುವ ಕಾರಿನಲ್ಲೇ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಾಸನ ತಾಲ್ಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಎಂಬುವವರ ಪತ್ನಿ ಈ ಚಾಲಾಕಿ ಮಹಿಳೆ.ಎಂಟು ವರ್ಷಗಳ ಹಿಂದೆ ಇವರ ವಿವಾಹವಾಗಿದ್ದು, ದಂಪತಿಗೆ ಒಂದು ಮಗುವೂ ಇದೆ. ಕಳೆದ ಕೆಲವು ಸಮಯದಿಂದ ಪತ್ನಿ ಪರಪುರುಷನ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಈ ಹಿಂದೆ ಒಮ್ಮೆ ಮನೆಯನ್ನು ಬಿಟ್ಟು ಹೋಗಿದ್ದಳು. ಆಗ ಪತಿ ಪ್ರಕಾಶ್ ದೊಡ್ಡ ಮನಸ್ಸು ಮಾಡಿ, ರಾಜಿ ಪಂಚಾಯಿತಿ ನಡೆಸಿ ಆಕೆಯನ್ನು ಮತ್ತೆ ಮನೆಗೆ ಕರೆತಂದಿದ್ದರು.

‘ನನಗೆ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಪತಿಯಲ್ಲಿ ಹೇಳಿ ಮನೆಯಿಂದ ಹೊರಬಂದಿದ್ದಳು. ಆದರೆ ಸಂಜೆಯಾದರೂ ಆಕೆ ಮನೆಗೆ ಮರಳದಿದ್ದಾಗ ಗಾಬರಿಗೊಂಡ ಪತಿ ಪ್ರಕಾಶ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಓಡಿಹೋಗಿರುವುದು ತಿಳಿದುಬಂದಿದೆ.

ಸಿನಿಮಾ ಸ್ಟೈಲ್‌ನಲ್ಲಿ ನಡೆದ ಈ ಮದುವೆಯ ವಿಡಿಯೋಗಳು ಈಗ ಸದ್ದು ಮಾಡುತ್ತಿವೆ. ಪ್ರಿಯಕರನ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಆತ ಈಕೆಗೆ ತಾಳಿ ಕಟ್ಟಿ, ಕಾಲಿಗೆ ಕಾಲುಂಗರ ತೊಡಿಸಿದ್ದಾನೆ. ಮಗು ಮತ್ತು ಪತಿಯನ್ನು ತೀರಾ ನಿರ್ಲಕ್ಷಿಸಿ ಈಕೆ ಮಾಡಿರುವ ಈ ನೌಟಂಕಿ ಆಟ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪತ್ನಿಯ ಈ ದ್ರೋಹದಿಂದ ಕಂಗೆಟ್ಟ ಪತಿ ಪ್ರಕಾಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದಾಗಲೂ ಪೊಲೀಸರು ‘ಗಂಡ ಕಿರುಕುಳ ನೀಡುತ್ತಿದ್ದಾನೆಯೇ?’ ಎಂದು ಕೇಳಿದ ಪ್ರಶ್ನೆಗೆ ಈಕೆ ಉತ್ತರಿಸಿರಲಿಲ್ಲ. ಈಗ ಮೊಬೈಲ್ ಟ್ರ್ಯಾಕಿಂಗ್ ಮೂಲಕ ಮಹಿಳೆಯ ಪತ್ತೆಯಾಗಿದ್ದು, ಪತ್ನಿಯ ನಡೆಯಿಂದ ನೊಂದ ಪತಿ ತನಗಾದ ಅನ್ಯಾಯದ ಬಗ್ಗೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!