ಹಾಸನ: ಆರ್ಕಿಟೆಕ್ಚರ್ ವಿದ್ಯಾರ್ಥಿಯೋರ್ವ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ.

ಹಾಸನ ಮೂಲದ ಅರುಣ್ (22) ಮೃತ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ರ್ಯಾಗಿಂಗ್ ಹೆದರಿ ಸೂಸೈಡ್ ಮಾಡಿಕೊಂಡಿರುತ್ತಾನೆ. ಚನ್ನಕೇಶವ ತುಳಸಿ ದಂಪತಿ ಪುತ್ರನಾಗಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಸೆಲ್ಫಿ ವಿಡಿಯೋ ಮಾಡಿ ಅದನ್ನು ಕಾಲೇಜಿನ ಗ್ರೂಪ್ ಗೆ ಹಾಕಿ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಚಿಕ್ಕವಯಸ್ಸಿನಿಂದ ಟಾಪರ್ ಆಗಿದ್ದ ಅರುಣ್ ಓದುವ ವಿಷಯದಲ್ಲಿ ಟಾಪರ್ ಕೂಡ ಆಗಿ ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫ್ರೀ ಸೀಟ್ ಸಿಕ್ಕಿದ್ದರಿಂದ ಅಲ್ಲಿ ಓದುತ್ತಿದ್ದನು. ಯಾರದ್ದೇ ಭಾವಚಿತ್ರ ನೋಡಿದರೂ ಕೇವಲ 5 ನಿಮಿಷದಲ್ಲಿ ಅವರ ಚಿತ್ರವನ್ನು ಫಟ್ ಅಂತಾ ಅವರು ಇರುವ ಹಾಗೆ ಬಿಡಿಸುತ್ತಿದ್ದ ಅಷ್ಟೂ ಬುದ್ಧಿವಂತನಾಗಿದ್ದ ಅರುಣ್.
ಹಾಸನ ಜಿಲ್ಲೆಯ ಮೂಲದ ಚನ್ನಕೇಶವ, ತುಳಸಿ ದಂಪತಿ ನಂದರಾಮಯ್ಯನ ಪಾಳ್ಯದಲ್ಲಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು ಶಾಲೆ ಕಾಲೇಜಿನಲ್ಲಿ ಟಾಪರ್ ಆಗಿದ್ದ ಜುಲೈ ಹತ್ತರಂದು ಕಾಲೇಜಿನಿಂದ ಮನೆಗೆ ಬಂದಿದ್ದು ಜುಲೈ 11ರಂದು ತಂದೆ ತಾಯಿ ಕೆಲಸ ಮಾಡಲು ಹೋಗಿದ್ದ ವೇಳೆ ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಲೇಜಿನ ಸ್ನೇಹಿತರ ರ‍್ಯಾಗಿಂಗ್ ನಿಂದ ಸಾಕಷ್ಟು ಮನನೊಂದಿದೆ ಎನ್ನಲಾಗಿದೆ ಸಾವಿಗೆ ಮುನ್ನ ಸ್ನೇಹಿತರ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಾಲೇಜಿನ ಗ್ರೂಪಿಗೆ ಶೇರ್ ಕೂಡ ಮಾಡಿದ್ದನು.
ಪ್ರಕರಣ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.