Thursday, February 12, 2026
Homeಜಿಲ್ಲಾಸುದ್ದಿಹಾಸನ: ಜೆಡಿಎಸ್ ಸತ್ಯಯಾತ್ರೆ ವೇಳೆ ಕಳ್ಳತನಕ್ಕೆ ಯತ್ನ: ಇಬ್ಬರಿಗೆ ಸಾರ್ವಜನಿಕರಿಂದ ಧರ್ಮದೇಟು

ಹಾಸನ: ಜೆಡಿಎಸ್ ಸತ್ಯಯಾತ್ರೆ ವೇಳೆ ಕಳ್ಳತನಕ್ಕೆ ಯತ್ನ: ಇಬ್ಬರಿಗೆ ಸಾರ್ವಜನಿಕರಿಂದ ಧರ್ಮದೇಟು

ಹಾಸನ: ಜೆಡಿಎಸ್ ಸತ್ಯಯಾತ್ರೆ ವೇಳೆ ಕಳ್ಳತನಕ್ಕೆ ಯತ್ನಿಸಿದ ಇಬ್ಬರಿಗೆ ಸಾರ್ವಜನಿಕರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಯಗಚಿ ಪ್ರೌಡ ಶಾಲೆ ಬಳಿ ನಡೆದಿದೆ.

ಎಗಚಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸತ್ಯ ಯಾತ್ರೆ ಅಂಗವಾಗಿ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಜಮಾಯಿಸಿದ್ದರು. ಇದನ್ನೇ ಲಾಭವಾಗಿಸಿಕೊಂಡ ಚೋರರು ಹಲವರ ಜೇಬಿಗೆ ಕತ್ತರಿ ಹಾಕಿ ನಗದು ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಕೆಲ ಹೊತ್ತಿನ ನಂತರ ಅನುಮಾನ ಬಂದು ಅವರನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಈ ವೇಳೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದು ಬಳಿಕ ಅವರನ್ನು ಠಾಣೆಗೆ ಕರೆದೊಯ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!