ಹಾಸನ: ಆಸ್ತಿಗಾಗಿ ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರದಬ್ಬಿರುವ ಘಟನೆ ಸಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು .. ಅಶ್ವಿನಿ ಎಂಬುವವರನ್ನು ಮರೀಗೌಡ ಎರಡನೇ ವಿವಾಹವಾಗಿದ್ದ ಆದರೆ ಇದು ಮೊದಲನೇ ಹೆಂಡತಿ ಮಕ್ಕಳಿಗೆ ಇಷ್ಟವಿರಲಿಲ್ಲ ಆದರೂ ಸಹಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಸಾವನ್ನಪ್ಪಿರುವ ಮರೀಗೌಡ
ತಂದೆ ಆಸ್ತಿ ಬಿಟ್ಟುಕೊಡುವಂತೆ ಮೊದಲ ಹೆಂಡತಿ ಮಕ್ಕಳಿಂದ ನಿತ್ಯ ಗಲಾಟೆ ನಡೆಸುತ್ತಿದ್ದು ಚಂದನ್ ಮತ್ತು ಚೇತನ್ ಎಂಬುವವರಿಂದ ನಿರಂತರ ಕಿರುಕುಳ ಮಾಡುತ್ತಲೇ ಇದ್ದರು.
ಅದೇ ರೀತಿ ಗುರುವಾರ ರಾತ್ರಿ ಮನೆಗೆ ನುಗ್ಗಿರುವ ಚಂದನ್ ಹಾಗೂ ಚೇತನ್ ಅಶ್ವಿನಿ ಅವರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಆಚೆ ಹಾಕಿರುವ ಪುತ್ರರು ಹಾಗೆ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿರುವ ಕಿರಾತಕರು
ಘಟನಾ ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
