Thursday, February 12, 2026
Homeಜಿಲ್ಲಾಸುದ್ದಿಹಾಸನ: ಮಾನವೀಯತೆ ಮೆರೆದ ಬಸ್‌ ಚಾಲಕ, ಕಂಡಕ್ಟರ್: ಸಾರ್ವಜನಿಕರಿಂದ ಮೆಚ್ಚುಗೆ!

ಹಾಸನ: ಮಾನವೀಯತೆ ಮೆರೆದ ಬಸ್‌ ಚಾಲಕ, ಕಂಡಕ್ಟರ್: ಸಾರ್ವಜನಿಕರಿಂದ ಮೆಚ್ಚುಗೆ!

ಹಾಸನ: ಚಲಿಸುತ್ತಿದ್ದ ಬಸ್ ನಲ್ಲಿ ತುಂಬು ಗರ್ಭಿಣಿ ಪ್ರಸವ ವೇದನೆಯಿಂದ ನರಳುತ್ತಿದ್ದಾಗ ಮುಂದೆ ಚಲಿಸುತ್ತಿದ್ದ ಬಸ್ ನ್ನು ಯೂಟರ್ನ್ ಮಾಡಿ ನೇರ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ತಲುಪಿಸಿ , ಆ ತಾಯಿಯ ರೋಧನೆ ನೋವಿಗೆ ಸ್ಪಂದಿಸಿದ ಆ ಸಾರಿಗೆ ಬಸ್ ಚಾಲಕ ಹಾಗೂ ಕಂಡಕ್ಟರ್ ಮಾನವೀಯತೆಯನ್ನು ಜನರು ಕೊಂಡಾಡಿದರು.

ಹೌದು .. ಸೆಪ್ಟಂಬರ್‌ 1, ಸೋಮವಾರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ ದಿಂದ ವಯಾ ಹಾಸನ ಮೂಲಕ ಬೆಂಗಳೂರಿಗೆ ತೆರಳುವ ಮಾರ್ಗ ಮದ್ಯ , ಹಾಸನದಲ್ಲಿ 7ರಿಂದ 8 ತಿಂಗಳು ತುಂಬಿದ ತುಂಬು ಗರ್ಭಿಣಿ ಬಸ್ ಹತ್ತಿದ್ದು , ಮಾರ್ಗ‌ ಮದ್ಯಯೇ ತೀವ್ರ ನೋವು ಕಾಣಿಸಿಕೊಂಡಿದೆ . ಚನ್ನರಾಯಪಟ್ಟಣದಿಂದ ಮುಂದೆ ಸಾಗುತ್ತಿದ್ದು, KSRTC ಬಸ್ ನಲ್ಲಿದ್ದ ಚಾಲಕ ಮೂರ್ತಿ , ಕಂಡಕ್ಟರ್ ಪರಮೇಶ್ ತಕ್ಷಣ ನವೋದಯ ಒಳ ರಸ್ತೆಯ ಮೂಲಕ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ಸೇರಿಸಿ ಕರ್ತವ್ಯದ ನಡುವೆ ಸಾರ್ಥಕತೆ ಮೆರೆದಿದ್ದಾರೆ .

ಕರುನಾಡ ಹೆಮ್ಮೆ , ಪ್ರಯಾಣಿಕರ ಆಶ್ರಯ ನಮ್ಮ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಚಾಲಕರಿಗೆ ಕರುನಾಡ ಜನೆತಯ ಪರವಾಗಿ ಕೃತಜ್ಞತೆಗಳನ್ನು ಸಹ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!