ಹಾಸನ: ಭಾರಿ ಮಳೆಗೆ ಆಲೂರು ತಾಲೂಕಿನ ಪಾಳ್ಯ – ಸಿಂಗೊಂಡನಹಳ್ಳಿ ನಡುವೆ ಹರಿಯುವ ಚಕ್ರತೀರ್ಥ ನದಿಯ ಕೊಚ್ಚಿ ಹೋಗಿದೆ
ಹೌದು ಇದರಿಂದ ಪಾಳ್ಯ, ಅರಾಳುಕೊಪ್ಪಲು, ಸಿಂಗೊಂಡನಹಳ್ಳಿ, ಹಾಚಗೊಂಡಹಳ್ಳಿ, ಮಲ್ಲೇನಹಳ್ಳಿ, ಅಬ್ಬನ ಮತ್ತು ಚಿನ್ನಳ್ಳಿ ಗ್ರಾಮಗಳು ಸಂಪರ್ಕವಿಲ್ಲದೆ ಓಡಾಡಕ್ಕೆ ಆಗದ ಸ್ಥಿತಿ ಉಂಟಾಗಿದ್ದು ಜನರು ಓಡಾಡಲು ಹೆದರುವ ಸಂದರ್ಭ ಒದಗಿ ಬಂದಿದೆ.
ಚಕ್ರತೀರ್ಥ ನದಿಯ ಕೊಚ್ಚಿ ಹೋಗಿದ್ದರಿಂದ ರಸ್ತೆ ಸಂಪರ್ಕ ಕಡಿತದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ ಹಾಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ.
ಈ ಹಿನ್ನಲೆಯಲ್ಲಿ ಮಾಹಿತಿ ತಿಳಿದ ಕೂಡಲೇ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೇತುವೆ ಪುನರ್‌ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವರ್ಷ ಮಲೆನಾಡಿನಲ್ಲಿ ಅಪಾರ ಮಳೆ. ರಸ್ತೆ, ಸೇತುವೆಗಳಿಗೆ ವ್ಯಾಪಕ ಹಾನಿ ಉಂಟಾಗಿದು ಹಾಗೆ ಹಾನಿಗೊಳಗಾದ ಪ್ರದೇಶಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯ ಮಾಡಿದರು.
ಹಾಗೆ ನದಿ ಪಾತ್ರದಲ್ಲಿನ ಚಾನಲ್‌ಗಳು ಮಣ್ಣು-ಹುಳು ತುಂಬಿಕೊಂಡಿದ್ದು ನೀರಿನ ಹರಿವು ಅಡ್ಡಿಯಾಗಿದೆನಾಲೆಗಳ ದುರಸ್ತಿ ತುರ್ತು ಅಗತ್ಯ ಎಂದು ಹೇಳಿದರು
ನಂತರ ಸ್ಥಳದಲ್ಲೇ ಜೆಸಿಬಿ ಮೂಲಕ ಸೇತುವೆ ಪೈಪ್‌ಗಳಲ್ಲಿ ಶೇಖರವಾದ ಮರದ ದಿಂಬಿ ಮತ್ತು ಕಸ ತೆರವು ಕಾರ್ಯಾಚರಣೆ ನಡೆಸಿದ್ದು ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತಿಯಲ್ಲಿ ಶಾಸಕರು ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
