ಹಾಸನ: ಬೆಳಂ ಬೆಳಗ್ಗೆ ಡಿಸಿ ಲತಾ ಕುಮಾರಿ ಅವರು ನಗರದ ಸುತ್ತಿದ್ದಲ್ಲದೆ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಪಡೆಯಲು ಸಲಹೆ ನೀಡಿದ್ದಲ್ಲದೇ ರಸ್ತೆ ಎರಡು ಬದಿ ನಡೆಯುವ ಸಂತೆ ವ್ಯಾಪಾರ ಸ್ಥಳ ಬದಲಾವಣೆಗೆ ಚಿಂತನೆ, ಜಿಲ್ಲಾ ಕ್ರೀಡಾಂಗಣ ಮಾಡಿ ಸೂಚನೆ ನೀಡಿದರು.
ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ಕೆಲ ದಿನಗಳಲ್ಲಿ ಡಿಸಿ ಅವರು ಆಗಾಗ ಹಾಸನ ನಗರ ಮತ್ತು ಸುತ್ತಮುತ್ತ ಕಡೆ ರೌಂಡ್ಸ್ ಮಾಡಿ ಇಲ್ಲಿ ಜನರಿಗೆ ಅನಾನುಕೂಲವಾಗುವ ಹಾಗೂ ಸಮಸ್ಯೆ ಇರುವುದನ್ನು ಸ್ಪಷ್ಟಪಡಿಸಲು ಪರಿಶೀಲನೆ ನಡೆಸುತ್ತಾ ಬಂದರು. ಇಂದು ಮಂಗಳವಾರವು ಕೂಡ ತಮ್ಮ ಮನೆಯಿಂದ ಬೆಳಗ್ಗೆ ಹೊರಟ ಡಿಸಿ ನಗರಕ್ಕೆ ಆಗಮಿಸಿದಾಗ ಅಲ್ಲಿ ಕೆಲಸಕ್ಕೆ ಎಂದು ಕೂಲಿ ಕಾರ್ಮಿಕರು ಗುಂಪು ಸೇರಿದನ್ನು ಗಮನಿಸಿ ವಿಚಾರಿಸಿದರು ಕೂಲಿ ಕಾರ್ಮಿಕರ ಸೌಲಭ್ಯ ಸಿಗದ ಬಗ್ಗೆ ಚರ್ಚಿಸಿದರು. ಎಲ್ಲರೂ ಆಧಾರ್ ಕಾರ್ಡ್, ಇತರ ದಾಖಲೆಗಳನ್ನ ತಂದುಕೊಟ್ಟರೆ ಶೀಘ್ರದಲ್ಲೇ ಕಾರ್ಮಿಕರ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದೆಂದು ಸಂಬಂಧ ಪಟ್ಟಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಹಾಗೆ ಪಕ್ಕದ ಬೀದಿ ಬದಿ ತಳ್ಳುವ ಗಾಡಿ ಅಂಗಡಿಗಳ ಬಗ್ಗೆ ವಿಚಾರಿಸಿದರು, ಅಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಬಂದು ಉಪಹಾರ ಮಾಡುವ ಜಾಗದ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಶೀಘ್ರದಲ್ಲೇ ಸಂತೆ ಮಾಡಲು ಜಾಗ ಗುರುತು ಮಾಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು.ಹಾಸನಾಂಬ ಒಳಾಂಗನ ಕ್ರೀಡಾಂಗಣ ಬಗ್ಗೆ ವಿಚಾರಿಸಿದರು. ಈಜು ಕೊಳದ ನೀರನ್ನು ಸ್ವಚ್ಛವಾಗಿಡಲು ಸೂಚನೆ ನೀಡಿದರು.