ಹಾಸನ: ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೌದು .. ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದು ಪ್ರತಿಭಟನೆಯಲ್ಲಿ ಹಿಂದೂಪರ ಕಾರ್ಯಕರ್ತರು, ವಕೀಲರು, ಭಕ್ತರು ಭಾಗಿಯಾಗಿದ್ದು ಹಾಗೆ ಕೋರ್ಟ್ ಕಾರ್ಯಕಲಾಪ ಬಹಿಷ್ಕರಿಸಿ ವಕೀಲರ ಸಂಘದಿಂದ ಸಹ ಪ್ರತಿಭಟನೆಗೆ ಬೆಂಬಲ ನೀಡಲಾಯಿತು.
ಅಂತರರಾಷ್ಟ್ರೀಯ ಮಟ್ಟದ ಷಡ್ಯಂತ್ರಕ್ಕೆ ಧರ್ಮಸ್ಥಳ ಗುರಿಯಾಗಿಸುತ್ತಿದ್ದಾರೆ ಮೊದಲು ಶಬರಿಮಲೆಯನ್ನ ಗುರಿಯಾಗಿಸಿದ್ದರು ಈಗ ಧರ್ಮಸ್ಥಳವನ್ನ ಗುರಿಯಾಗಿಸಲಾಗಿದೆ ಇಂತಹ ಬುದ್ಧಿ ಜೀವಿಗಳ ಕೃತ್ಯಕ್ಕೆ ನಮ್ಮ ಧಿಕ್ಕಾರವಿದೆ ಯಾರೋ ಒಬ್ಬ ಹೇಳಿದ ಎಂಬ ಕಾರಣಕ್ಕೆ ಎಸ್‌ಐಟಿ ತನಿಖೆ ನಡೆಸಿದ್ದೀರಿ ನೀವು ಹಿಂದೂ ಧರ್ಮದ ವಿರುದ್ಧ ಅಧಿಕಾರ ಮಾಡುತ್ತಿದ್ದೀರಿ ಕೊನೆ ಬಾರಿ ಅಧಿಕಾರ ನಡೆಸುತ್ತಿದ್ದೀರಿ ಸಿದ್ದರಾಮಯ್ಯನವರೇ ನೀವು ದೇವರ ಶಾಪಕ್ಕೆ.. ಧರ್ಮದ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಭಕ್ತರು
