ಹಾಸನ: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮಹಾ ಎಡವಟ್ಟುವೊಂದು ಬಟಾ ಬಯಲಾಗಿದ್ದು ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ಬಲಗಾಲು ಕುಯ್ದ ವೈದ್ಯರ ನಿರ್ಲಕ್ಷ್ಯತನವನ್ನ ನಾವಿಲ್ಲಿ ನೋಡಬಹುದು.
ಹೌದು .. ಇದೆಲ್ಲೋ ಬೇರೆ ಕಡೆ ನಡೆದಿದ್ದ ಹಾಸನ ಜಿಲ್ಲಾಸ್ಪತ್ರೆ ಹಿಮ್ಸ್ ನಲ್ಲಿ ನಡೆದ ಅಚಾತುರ್ಯ ಘಟನೆ ಬೆಳಕಿಗೆ ಬಂದಿದೆ. ವೈದ್ಯ ಸಂತೋಷ್ ಎಂಬುವವರಿಂದ ಈ ಎಡವಟ್ಟು ನಡೆದಿರುತ್ತದೆ.
. ಎರಡೂವರೆ ವರ್ಷದ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ ಎಂಬುವರಿಗೆ ಶಸ್ತ್ರಚಿಕಿತ್ಸೆ ಮಾಡಿ ಎಡಗಾಲಿಗೆ ರಾಡ್ ಅಳವಡಿಸಿದ್ದ ವೈದ್ಯರು. ಆದರೆ ಕಾಲುನೋವು ಕಾಣಿಸಿಕೊಂಡಿದ್ದರಿಂದ ಹಿಮ್ಸ್ ಆಸ್ಪತ್ರೆಯ ವೈದ್ಯ ಸಂತೋಷ್ ಬಳಿ ತೋರಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿಯ ಕಾವಲು ಗ್ರಾಮದ ನಿವಾಸಿಯಾಗಿರುವ ಜ್ಯೋತಿ
ಆದರೆ ಹಿಮ್ಸ್ ಆಸ್ಪತ್ರೆಯ ವೈದ್ಯ ಸಂತೋಷ್ ಅವರು ರಾಡ್ ತೆಗೆಸುವಂತೆ ಹೇಳಿದ್ದರಿಂದ ಶನಿವಾರ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ. ಆ ಡಾಕ್ಟರ್ ಮಾಡಿದ್ದೇ ಇಲ್ಲಿ ಮತ್ತೊಂದು ಮಹಾ ಎಡವಟ್ಟು. ಏನಂದ್ರೆ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ಬಲಗಾಲು ಕೊಯ್ದು ವೈದ್ಯ ಸಂತೋಷ್.
ವೈದ್ಯರ ನಿರ್ಲಕ್ಷ್ಯತನದ ವಿರುದ್ಧ ಜ್ಯೋತಿ ಹಾಗೂ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು ಈ ಬಗ್ಗೆ ಪೊಲೀಸರಿಗೂ ದೂರು ದಾಖಲಿಸಿದ್ದು ಅವನನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳು ಮುಂದೆಂದು ಬೇರೆಯವರಿಗೆ ಆಗಬಾರದೆಂದು ತಿಳಿಸಲಾಗಿದೆ.
