Monday, February 9, 2026
Homeಜಿಲ್ಲಾಸುದ್ದಿಹಾಸನ: ಜಿಲ್ಲಾಧಿಕಾರಿಗಳಿಗೆ ರೈತರ ಅಹವಾಲು: ಕಾಡಾನೆ ದಾಳಿಯ ಶಾಶ್ವತ ಪರಿಹಾರಕ್ಕೆ ಒತ್ತಾಯ

ಹಾಸನ: ಜಿಲ್ಲಾಧಿಕಾರಿಗಳಿಗೆ ರೈತರ ಅಹವಾಲು: ಕಾಡಾನೆ ದಾಳಿಯ ಶಾಶ್ವತ ಪರಿಹಾರಕ್ಕೆ ಒತ್ತಾಯ

ಹಾಸನ : ಜಿಲ್ಲೆಯ ಜಲ್ವಂತ ಸಮಸ್ಯೆ ಮಾನವ- ಪ್ರಾಣಿ ಸಂಘರ್ಷ ಇದನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ 4 ಸಭೆಗಳನ್ನು ನಡೆಸಿ ಚರ್ಚೆ ಮಾಡಲಾಗಿದೆ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮೋಖವಾಗಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಇಂದು ಕಾಡಾನೆ ಮತ್ತು ಮಾನವ ಸಂಘರ್ಷ ನಿಯಂತ್ರಣ ಕುರಿತು ಅರೇಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಆತ್ಮ ವಿಶ್ವಾಸ ನಿರ್ಮಾಣ ಕಾರ್ಯಾಗಾರವನ್ನು ಉದ್ಘಾಟಿಸಿ ಸಾರ್ವಜನಿಕರ ಅನಿಸಿಕೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುವುದು ಸವಾಲಿನ ಕೆಲಸ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.

ತಿಂಗಳ ಎರಡು ಗುರುವಾರ ಕಡ್ಡಾಯವಾಗಿ ಸಭೆಯನ್ನು ಮಾಡುತ್ತಿದ್ದೇವೆ. ಇದರಿಂದ ನಮಗೆ ಬಹಳ ಮಾಹಿತಿಗಳು ದೊರೆಯುತ್ತಿವೆ ಎಂದರಲ್ಲದೆ, 2018ನೇ ವರ್ಷದಿಂದ ಇತ್ತೀಚೆಗೆ ಆನೆಯ ಸಂಘರ್ಷ ಹೆಚ್ಚಾಗಿರುವುದನ್ನು ನಾನು ಗಮನಿಸಿದ್ದೇನೆ. ಇದರ ಕುರಿತು ಚರ್ಚಿಸಲಾಗಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡಲು ಅರಣ್ಯ ಇಲಾಖೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಪರಿಹಾರಕ್ಕೆ ಪಣ ತೊಟ್ಟಿದ್ದಾರೆ. ಇದು ಫಲಪ್ರದವಾಗುವುದು ಎಂದು ನಂಬಿದ್ದೇನೆ ಎಂದರು.

50 ಜನರು ತಮ್ಮ ಅಮೂಲ್ಯ ಸಲಹೆಗಳನ್ನು, ಪ್ರಬುದ್ಧತೆಯಿಂದ ತೀಕ್ಷ್ಣವಾಗಿ, ನಿಷ್ಠುರವಾಗಿ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದಿದ್ದೀರಿ, ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸೌಹಾರ್ದ, ಸಹನೆ ಹಾಗೂ ತಾಳ್ಮೆಯಿಂದ ಸಹಕರಿಸುವುದರಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರಲ್ಲದೆ, ವಿವಿಧ ಇಲಾಖೆಗಳು ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಪರಿಹಾರ ಕಂಡು ಕೊಳ್ಳಲು ಒಂದು ನಿರ್ಧಿಷ್ಟವಾದ ನಿಲುವು ತೆಗೆದುಕೊಂಡು ಪರಿಹಾರ ನೀಡಬೇಕು ಎಂದರು.

ದೇಶದ ಪ್ರಜೆಗಳಿಗೆ ನಂಬಿಕಾರ್ಹ ಆತ್ಮವಿಶ್ವಾಸ ಇರಬೇಕು. ತಮ್ಮ ನೋವು ಆಕ್ರೋಶ ವ್ಯಕ್ತಪಡಿಸಿದ್ದೀರಿ, ಸಮಸ್ಯೆಗಳ ಆಳವನ್ನು ಅರಿಯಲು ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮಾತ್ರ ಸಮಸ್ಯೆಗಳ ತೀವ್ರತೆಯನ್ನು ಅರಿತು ಪರಿಹಾರ ಕಂಡುಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಳ ಹಂತದವರು ನೀಡುವ ಮಾಹಿತಿಯನ್ನು ಪರಿಗಣಿಸದೆ ಖುದ್ದು ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿರುತ್ತೇನೆ ಎಂದು ತಿಳಿಸಿದರು.

ಗುಂಪಾಗಿ ಆನೆಗಳನ್ನು ಓಡಿಸಲು ವೈಜ್ಞಾನಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರಲ್ಲದೆ, ಆನೆ ಮತ್ತು ಮಾನವ ಸಂಘರ್ಷಕ್ಕೆ ಶೀಘ್ರ ಮತ್ತು ಶಾಶ್ವತ ಪರಿಹಾರಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಸಮಯ ಸದುಪಯೋಗಪಡಿಸಿಕೊಂಡು ಸಮಸ್ಯೆ ಬಗೆಹರಿಸಲು, ಅವಘಡ ತಪ್ಪಿಸಲು ನಿಖರವಾದ ಸಮಯ ನಿಗಧಿಪಡಿಸಿಕೊಂಡು ನುರಿತ ತಂಡ ನೇಮಿಸಿಕೊಂಡು ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಖಂಡಿತ ಅದರಲ್ಲಿ ಸಫಲರಾಗುತ್ತೇವೆ ಎಂದರು.

ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ನಮಗೂ ಸಮಯ ಬೇಕಾಗುತ್ತದೆ ಹಾಗಾಗಿ ಸಮಸ್ಯೆಗಳನ್ನು ಪರಿಚರಿಸಿಕೊಳ್ಳಲು ಒಂದು ಸಂಘಟನೆಯನ್ನು ಮಾಡಿಕೊಂಡು ಒಬ್ಬರ ನಾಯಕತ್ವದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಅರೇಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೂಡಲೆ ವೈದ್ಯರನ್ನು ನಿಯೋಜನೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರಲ್ಲದೆ ಆರೋಗ್ಯ ಕೇಂದ್ರದ ಸದೃಢಗೊಳಿಸಲು ಕೂಡ ನಿಗಾವಹಿಸುವುದಾಗಿ ತಿಳಿಸಿದರಲ್ಲದೆ, ಮೊಬೈಲ್ ಟವರ್ ಇಲ್ಲದೆ ನೆಟ್‌ವರ್ಕ್ ಸಮಸ್ಯೆ ಇದೆ ಪೋನ್ ಮಾಡಿ ಹೇಗೆ ಸಮಸ್ಯೆ ತಿಳಿಸುವುದು ಎಂಬ ಸಾರ್ವಜನಿಕರ ಪ್ರಶ್ನೆಗೆ ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಯೋಚನೆ ಮಾಡಲಾಗಿದೆ ಎಂದು ತಿಳಿಸಿದರು.

ಚೆಸ್ಕಾಂ ಅವರು ವಿದ್ಯುತ್ ಕಂಬ, ಬೀದಿ ದೀಪದ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ವ್ಯಾಪ್ತಿಯಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ

ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದAತೆ ನಿಗಾವಹಿಸಬೇಕು ಜೊತೆಗೆ ಮಕ್ಕಳ ಸುರಕ್ಷತೆ ಮೊದಲ ಆಧ್ಯತೆ ನೀಡಿ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ ಜೊತೆ ಸೇರಿ ಕೆಲಸ ಮಾಡಬೇಕು. ಯಾವ ಯಾವ ಇಲಾಖೆ ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ ಎಂದರು.

ಕೂಲಿ ಕಾರ್ಮಿಕರಿಗೆ ತೊಂದರೆ ಆಗದಂತೆ ಇ-ಶ್ರಮ್ ಕಾರ್ಡ್, ಎಬಿಆರ್‌ಕೆ ಕಾರ್ಡðಗಳಿಲ್ಲದೆ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿ ಎಂದರಲ್ಲದೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಎಲ್ಲವುಗಳು ಸೇರಿ ಯಾವ ಸಮಸ್ಯೆಯನ್ನು ಯಾವ ಇಲಾಖೆಯ ಜೊತೆಗೂಡಿ ಎಷ್ಟು ಸಮಯದಲ್ಲಿ ಬಗೆಹರಿಸಬಹುದು ಎಂಬುದಕ್ಕೆ ಮೊದಲು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಸ್ಪಂದನೆ ಮಾಡಿ ಅದಕ್ಕೆ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಏಳುಕುಂಡಲು ಅವರು ಮಾತನಾಡಿ ಹಾಸನ ಜಿಲ್ಲೆಯಲ್ಲಿ 15-20 ವರ್ಷಗಳಿಂದ ಆನೆಗಳ ಹಾವಳಿ ಇದೆ ಆದರೆ ಈ ಭಾಗದಲ್ಲಿ 4-5 ವರ್ಷಗಳಿಂದ ಆನೆಗಳ ಹಾವಳಿ ಹೆಚ್ಚಾಗಿದೆ ಕಾಫಿ ಮತ್ತು ಇತರೆ ಬೆಳೆಗಳು ನಷ್ಟವಾಗುತ್ತಿದೆ ಇಲ್ಲಿಯ ಸಮಸ್ಯೆ ಅರ್ಥ ಮಾಡಿಕೊಂಡಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಸತತ ಪ್ರಯತ್ನ ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ಭದ್ರಾದಲ್ಲಿ ಸಾಫ್ಟ್ ರೀಲಿಪ್ ಸೆಂಟರ್ ಮಾಡಲು ಈಗಾಗಲೇ ಪ್ರಾರಂಭವಾಗಿದ್ದು, ಒಂದು ವರ್ಷದೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಡ್ರೋಣ್ ಮತ್ತು ಕೃತಕ ಬುದ್ಧಿಮತ್ತೆ ಕ್ಯಾಮರ ಬಳಸಿ ಕೊಂಡು ನಿರ್ವಹಣೆ ಗುರಿ ಹೊಂದಿದ್ದು, ಆನೆಗಳನ್ನು ಹಿಮ್ಮೆಟ್ಟಿಸಲು 140 ಜನ ಇಟಿಎಫ್ ಸಿಬ್ಬಂದಿ ಹಾಗೂ ನಾವು ಸಾರ್ವಜನಿಕರೊಂದಿಗೆ ಇದ್ದೇವೆ ಎಂದು ತಿಳಿಸಿದರು.

ಆನೆ ಹಾವಳಿಯಿಂದ ಸಾವು-ನೋವುಗಳಾಗಿ ಪರಿಹಾರ ಬಿಟ್ಟು ಹೋಗಿರುವುದನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದ ಅವರು ಭಾಗಶಃ ಅಂಗವಿಕಲತೆ ಆಗಿರುವವರಿಗೂ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ತಿರುವುಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ, ಸಮಸ್ಯೆ ಆಗುತ್ತಿರುವುದನ್ನು ಸರಿಪಡಿಸಲು ಸಂಬAಧಪಟ್ಟ ಗ್ರಾಮ ಪಂಚಾಯಿತಿ ಯೊಂದಿಗೆ ಸಮನ್ವಯದಿಂದ ಬಗೆಹರಿಸಲಾಗುವುದು ಎಂದು ತಿಳಿಸಿದರಲ್ಲದೆ, ಅಕೆಶೀಯ ಮತ್ತು ನೀಲಗಿರಿ ಗಿಡಗಳನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಫಿ ಬೆಳೆಗಾರರಾದ ಮಂಜುನಾಥ ಶೆಟ್ಟಿ, ರೇಣುಕಾನಂದ, ಅನ್ನಪೂರ್ಣ, ಕೋಗಿಲೆ ಮನೆಯ ಕುಮಾರ್, ಬಿಕ್ಕೋಡು ಬಸವರಾಜು, ಸೈಯದ್ ಖಾದೀರ್ ಪಾಷಾ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಬೆಳೆಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ, ಕಾಡಾನೆಗಳಿಂದ ಶೇ.90 ರಷ್ಟು ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತದೆ. ಜಿಲ್ಲಾಧಿಕಾರಿ ಅವರು ಕಾರ್ಮಿಕರು ಬೆಳಗ್ಗೆ 9 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಮಾತ್ರ ಕಾರ್ಮಿಕರು ಕೆಲಸ ಮಾಡುವಂತೆ ಆದೇಶ ಮಾಡಿದ್ದರೂ ಇಂದಿಗೂ ಕೂಡ ತಮ್ಮ ಆದೇಶ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಏನು ಕ್ರಮಕೈಗೊಂಡಿರುವುದಿಲ್ಲ, ಬೆಳೆ ನಾಶವಾಗಿದೆ, ಪರಿಹಾರ ಎಕರೆಗೆ 10 ಸಾವಿರ ಪರಿಹಾರ ನೀಡುತ್ತಾರೆ ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಪರಿಹಾರ ಹೆಚ್ಚಿಸುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯ ಗುಡಿಯಿಂದ ಪಟಾಕಿ ಒಡೆದು ಹಾಸನ ಜಿಲ್ಲೆಗೆ ಓಡಿಸುತ್ತಾರೆ. ಅಸ್ಸಾಂ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ ಇದರ ಬಗ್ಗೆ ಗಮನಹರಿಸಿ ಹಾಸನ ಜಿಲ್ಲೆಯಿಂದ ಆನೆಗಳನ್ನು ಸ್ಥಳಾಂತರಕ್ಕೆ ಕ್ರಮವಹಿಸುವಂತೆ ಮನವಿ ಮಾಡಿದರಲ್ಲದೆ, ಸೌಹಾರ್ದಯುತವಾಗಿ ಕನಿಷ್ಠ 50 ಎಕರೆಗೆ ಸೋಲಾರ್ ಅಳವಡಿಸಲು 75 ರಷ್ಟು ಸಬ್ಸಿಡಿ ನೀಡುವಂತೆ ಮನವಿ ಮಾಡಿದರು.

ಈಗಾಗಲೇ ತರಬೇತಿ ಪಡೆದಿರುವವರಿಗೆ ಗನ್ ನೀಡುವಂತೆ ಮನವಿ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೀಡಲು ಮನವಿ ಮಾಡಿದರಲ್ಲದೆ, ಆನೆ ನಮ್ಮ ಹಕ್ಕು ಕಿತ್ತುಕೊಂಡಿದೆ. ಪಾಟಾಕಿ ಒಡೆದು ಹತ್ತಿಂದತ್ತ ಓಡಿಸುತ್ತಾರೆ ಅಷ್ಟೆ. ಏನು ಪ್ರಯೋಜನವಾಗುತ್ತಿಲ್ಲ, ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದರು. ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲ, 100 ರಷ್ಟು ಸೋಲಾರ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು. 15 ಲಕ್ಷ ಪರಿಹಾರದಲ್ಲಿ 10 ಲಕ್ಷ ನೀಡಿದ್ದಾರೆ ಇನ್ನೂ 5 ಲಕ್ಷ ನೀಡಿಲ್ಲ ಎಂದು ತಿಳಿಸಿದರು.

ಬಂಡಿಹಳ್ಳಿ ವ್ಯಾಪ್ತಿಯಲ್ಲಿ 177 ಎಕರೆಯಲ್ಲಿ ನೀಲಿಗಿರಿ ಅಕೇಶಿಯ ಗಿಡಗಳಿವೆ ಆನೆಗಳಿಗೆ ಮೇವು ಸಿಗುವ ಹಲಸು, ಬಿದಿರು, ನೇಪಿಯರ್ ಹುಲ್ಲುಗಳನ್ನು ಬೆಳೆಸಿ ಎಂದ ಅವರು ವನ್ಯ ಜೀವಿಗಳ ಸಂರಕ್ಷಣೆ ಕಾಯ್ದೆ ಯೋಜನೆಯಡಿ ಆನೆಗಳಿಗೆ ಆಹಾರವನ್ನು ಹೊರಗಡೆಯಿಂದ ಒದಗಿಸಬಹುದು ಇದರ ಬಗ್ಗೆ ಗಮನಹರಿಸಿ ಎಂದು ತಿಳಿಸಿದರು. ಸಭೆ ಮಾಡಿ ಕಾಲಹರಣ ಮಾಡುವುದರ ಬದಲಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಜೀವ ಕಳೆದುಕೊಂಡಿರುವ ಕುಟುಂಬಗಳ ಬಗ್ಗೆ ಗೌರವದಿಂದ ನಡೆದುಕೊಳ್ಳಿ ಎಂದು ಮನವಿ ಮಾಡಿದರು. ಕೈಕಾಲು ಕಳೆದುಕೊಂಡವರಿಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಶ್ರೀಧರ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಷರೀಫ್, ಚೇತನ್ ಕುಮಾರ್ ಮತ್ತಿತರರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!