ಹಾಸನ: ಎಟಿಎಂಗೆ ಹಣ ಹಾಕದೇ ವಂಚನೆ ಮಾಡಿದ್ದ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಿಎಂಎಸ್ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬೂವನಹಳ್ಳಿ ಗ್ರಾಮದ ನಂದೀಶ್.ಬಿ.ಎಲ್ ಹಾಗೂ ದಾಸರಕೊಪ್ಪಲಿನ ಮಧುಕುಮಾರ್.ಎಂ.ಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

3,40,28,200 ರೂ. ಹಣವನ್ನು ಹದಿನೈದು ಎಟಿಎಂಗಳಿಗೆ ಹಾಕದೇ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಿಎನ್‌ಎಸ್ 316 (4) 318(4), 3 (5) ಅಡಿ ಪ್ರಕರಣ ದಾಖಲಾಗಿದೆ.
ಫೆ.18 ರಂದು ಮತ್ತೆ ಆಡಿಟ್ ಮಾಡಿದಾಗ ಕೋಟ್ಯಂತರ ರೂ. ವ್ಯತ್ಯಾಸ ಬಂದಿದೆ. ಅಂದಾಜು 2 ಕೋಟಿಗೂ ಹೆಚ್ಚು ಹಣವನ್ನು ಸಿಎಂಎಸ್ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ನಂದೀಶ್ ಹಾಗೂ ಮಧು ಎಂಬುವವರು ಎಟಿಎಂಗಳಿಗೆ ಹಣ ಹಾಕಲು ತೆರಳಿದ್ದ ವೇಳೆ ಹಣ ಹಾಕದೆ. ಹಣ ಹಾಕಿರುವುದಾಗಿ ಎಂಟ್ರಿ ಮಾಡಿ ದುಡ್ಡನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
