Wednesday, February 11, 2026
Homeಜಿಲ್ಲಾಸುದ್ದಿಹಾಸನ: ಏಕಾಏಕಿ ಕುಸಿದುಬಿದ್ದ ನಿರ್ಮಾಣ ಹಂತದ ಬೃಹತ್ ಶೆಡ್:‌ ಅದೃಷ್ಟವಶಾತ್ ಕಾರ್ಮಿಕರು ಪಾರು

ಹಾಸನ: ಏಕಾಏಕಿ ಕುಸಿದುಬಿದ್ದ ನಿರ್ಮಾಣ ಹಂತದ ಬೃಹತ್ ಶೆಡ್:‌ ಅದೃಷ್ಟವಶಾತ್ ಕಾರ್ಮಿಕರು ಪಾರು

ಹಾಸನ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಶೆಡ್ ಏಕಾಏಕಿ ಕುಸಿದುಬಿದ್ದ ಘಟನೆ ಹಾಸನದ ಅಗಿಲೆ ಗ್ರಾಮದ ಬಳಿ ನಡೆದಿದೆ.

ಕಾರ್ಮಿಕರು ಕೆಲಸ ಮಾಡುವ ವೇಳೆಯೇ ಬೃಹತ್ ಶೆಡ್ ದಿಢೀರ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಶೆಡ್ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮರು ಬಳಕೆಯ ಕಸ ವಿಂಗಡಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು. ಇದಕ್ಕಾಗಿ ಸಿಮೆಂಟ್ ಪಿಲ್ಲರ್ ಮೇಲೆ ಬೃಹತ್ ಕಬ್ಬಿಣದ ಕಂಬ ಅಳವಡಿಸಲಾಗಿತ್ತು. ಇದ್ದಕ್ಕಿದ್ದಂತೆ ಕಂಬ ಬಿದ್ದು, ಶೆಡ್ ನೆಲಕ್ಕುರುಳಿದೆ. ಕಳಪೆ ಕಾಮಗಾರಿಯಿಂದ ಶೆಡ್ ಕುಸಿದು ಬಿದ್ದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!