ಹಾಸನ: ತಾಲೂಕಿನ ಸಾವಂತಳ್ಳಿ ಗ್ರಾಮದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದನ್ನು ಸುಮಾರು 82 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ ನಡುವೆ ಅರಣ್ಯ ಇಲಾಖೆಯಿಂದ ಕಾರ್ಯಚರಣೆ ನಡೆದಿದ್ದು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಹಾಗೆಯೇ ನೂರಕ್ಕೂ ಹೆಚ್ಚು ಪೋಲಿಸರನ್ನು ಭದ್ರತೆಗಾಗಿ ನಿಯೋಜನೆಗೆ ಮಾಡಲಾಗಿದೆ. ಈ ವೇಳೆ ಅರಣ್ಯ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದ ಪ್ರದೇಶವನ್ನು ಜೆಸಿಬಿ ಮೂಲಕ ತೆರಗೊಳಿಸಿ ಅದೇ ಜಾಗದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡಲಾಯಿತು.
ಸರ್ವೆ ನಂಬರ್ 99ರಲ್ಲಿ ಇದ್ದ ಭೂಮಿಯನ್ನು ಸಾವಂತ ಹಳ್ಳಿ ಗ್ರಾಮಸ್ಥರು ಒತ್ತುವರಿ ಮಾಡಿ ವಿವಿಧ ಬೆಳೆ ಬೆಳೆದಿದ್ದರು. ಈ ಹಿಂದೆ ತೆರವಿಗೆ ನೋಟಿಸ್ ನೀಡಲಾಗಿತ್ತು ಆದರೆ ಅವರು ಏನೂ ಉತ್ತರಿಸದಿದ್ದಾಗ ಶನಿವಾರ ಒತ್ತುವರಿ ತೆರವು ಕಾರ್ಯ ನಡೆದಿದೆ. ಹಾಗೆ ರೈತರು ಬೆಳೆದಿದ್ದ ಮೆಕ್ಕೆಜೋಳವನ್ನು ಕಟಾವು ಂಆಡಿಕೊಂಡು ಹೋಗಿದ್ದಾರೆ.
ಸ್ಥಳದಲ್ಲಿ ಸಿಸಿಎಫ್ ಏಡುಕುಂಡಲ, ಡಿಸಿಎಫ್ ಸೌರವ್ ಕುಮಾರ್, ಎಸ್ ಪಿ ಮೊಹಮ್ಮದ್ ಸುಜಿತ, ಎಎಸ್ಪಿಗಳಾದ ವೆಂಕಟೇಶ್ ನಾಯ್ಡು ತಮ್ಮಯ್ಯ ಆರ್ ಎಫ ಒ ಲಷ್ಕರ್ ನಾಯ್ಕ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.