ಹಾಸನ: ಅಕ್ರಮವನ್ನ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.
ಆರ್ ಟಿಐಯಲ್ಲಿ ಅರ್ಜಿ ಹಾಕಿದ ರೈತ ರವಿ 16 ಸಾವಿರ ಪುಟಗಳ ದಾಖಲೆ ಕೊಟ್ಟಿದ್ದ ಅಧಿಕಾರಿಗಳು ಆದರೆ RTI ಜೆರಾಕ್ಸ್ ಪಡೆಯಲು 32 ಸಾವಿರ ರೂಪಾಯಿ ಕಟ್ಟಬೇಕಾಗಿತ್ತು ಆದರೆ ದುಡ್ಡಿರದ ಕಾರಣ ತನ್ನ ಬಳಿ ಇದ್ದ ಹಸುವನ್ನು ಮಾರಿ RTI ದಾಖಲೆ ಪಡೆದುಕೊಂಡಿರುತ್ತಾನೆ.
ಆ ಬಳಿಕ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ರವಿ ಇದರಿಂದ ಕುಪಿತಗೊಂಡು ಆನಂದ್, ವಿಶ್ವ ಎಂಬುವರು ಹಲ್ಲೆ ನಡೆಸಿದ್ದರು.
ಸದ್ಯ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಪ್ರಕರಣ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
