Wednesday, March 25, 2026
Homeಜಿಲ್ಲಾಸುದ್ದಿಹಾಸನ: ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಶಾಸಕ ಸಿಮೆಂಟ್ ಮಂಜು ದಿಢೀ‌ರ್ ಭೇಟಿ:ವಿದ್ಯಾರ್ಥಿಗಳ ಜೊತೆ...

ಹಾಸನ: ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಶಾಸಕ ಸಿಮೆಂಟ್ ಮಂಜು ದಿಢೀ‌ರ್ ಭೇಟಿ:ವಿದ್ಯಾರ್ಥಿಗಳ ಜೊತೆ ಚರ್ಚೆ!

ಹಾಸನ: ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಶಾಸಕ ಸಿಮೆಂಟ್ ಮಂಜು ದಿಢೀ‌ರ್ ಭೇಟಿ ನೀಡಿದ್ದು ಅಲ್ಲಿನ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.

ಹೌದು .. ಹಾಸನ ಜಿಲ್ಲೆ ಆಲೂರು ಪಟ್ಟಣದಲ್ಲಿರುವ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿದ್ದು ವಸತಿ ನಿಲಯದ ಅವ್ಯವಸ್ಥೆ ಕಂಡು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು

ಹಾಗೆ ವಸತಿ ನಿಲಯದ ಅವ್ಯವಸ್ಥೆ, ಸಮಸ್ಯೆಗಳ ಕುರಿತು ಶಾಸಕರು ಎದುರೇ ಬರೆದು ಪಟ್ಟಿ ಮಾಡಿ ತಿಳಿಸಿದ ವಸತಿ ನಿಲಯದ ಬಾಲಕರು. ಈ ಹಿಂದೆ ಇದ್ದ ಮಹಿಳಾ ವಾರ್ಡನ್ ಹಾಗೂ ಸಹಾಯಕ ನಿರ್ದೇಶಕ ಲಿಂಗರಾಜು ವಿರುದ್ಧ ದೂರಿನ ಸುರಿಮಳೆಯಗೈದ ಬಾಲಕರು. ತದಾನಂತರ ಶೌಚಾಲಯದ ಅವ್ಯವಸ್ಥೆ ಕಂಡು ವಸತಿ ನಿಲಯದ ಸಿಬ್ಬಂದಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಅದರ ಜೊತೆ ಆಹಾರ ಗುಣಮಟ್ಟ ಪರೀಕ್ಷೆ ಮಾಡಲು ಅಡುಗೆ ಕೋಣೆಗಳಿಗೆ ಭೆಟಿ ನೀಡಿ ಶುಚಿತ್ವ ಬಗ್ಗೆ ಗಮನ ಹರಿಸಿದ್ದಲ್ಲದೇ ಆಹಾರದ ಗುಣಮಟ್ಟ ತಿಳಿದುಕೊಳ್ಳಲು ಸ್ವತಃಹ ಬಾಲಕರ ಜೊತೆ ಶಾಸಕರು ಕುಳಿತು ಊಟ ಮಾಡಿದರು.

ಹೀಗೆ ಸತತ ಮೂರು ಗಂಟೆ ವಸತಿ ನಿಲಯದಲ್ಲಿದ್ದು ಸಮಸ್ಯೆ ಆಲಿಸಿದ ಶಾಸಕರು. ಚರ್ಮರೋಗದಿಂದ ಬಳಲುತ್ತಿರುವ ಬಾಲಕರಿಗೆ ಚಿಕಿತ್ಸೆ ನೀಡುವಂತೆ ರಾತ್ರಿಯೇ ವಸತಿ ನಿಲಯಕ್ಕೆ ವೈದ್ಯರನ್ನು ಕರೆಸಿದ ಶಾಸಕರು.

ವಸತಿ ನಿಲಯದ ಭೇಟಿ ವೇಳೆ ಶಾಸಕರರಿಗೆ ಸ್ಥಳೀಯ ಮುಖಂಡರು ಸಾಥ್‌ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!